Advertisement

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

09:38 PM Jan 07, 2022 | Team Udayavani |

ಮೈಸೂರು: ಯುವ ಕಲಾವಿದ ದಂಡಯ್ಯ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ವಿಜಯನಗರದ ಶ್ರೀ ಕಲಾನಿಕೇತನ ಆರ್ಟ್‌ ಗ್ಯಾಲರಿಯಲ್ಲಿ ನಡೆಯಿತು. ಶ್ರೀ ಕಲಾನಿಕೇತನ ಸ್ಕೂಲ್‌ ಆಫ್ ಆರ್ಟ್‌ ಪ್ರಾಂಶುಪಾಲ ಕೆ.ಸಿ.ಮಹದೇರ್ಟಾಟ್ಟಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ, ಚಿತ್ರಕಲೆ ಬಹಳ ಶಕ್ತಿಯುತ ಮಾಧ್ಯಮ.

Advertisement

ಇದರ ಮೂಲಕ ಸಾಮಾಜಿಕ ತಲ್ಲಣ ಮತ್ತು ಕಲಾವಿದರು ತಮ್ಮ ಬದುಕಿನ ಬವಣೆಯನ್ನು ಅಭಿವ್ಯಕ್ತಿಗೊಳಸಬಹುದಾಗಿದೆ. ಇಲ್ಲಿ ದುಂಡಯ್ಯ ಅವರು ತಾನು ಅನುಭವಿಸಿದ ಕಷ್ಟಕರ್ಪಣ್ಯಕ್ಕೆ ಕುಂಚ ಸ್ಪರ್ಶ ನೀಡಿ¨ªಾರೆ. ಜತೆಗೆ ಸಮಾಜದಲ್ಲಿ ತಾವು ಶೋಷಣೆ ಮತ್ತು ಅನ್ಯಾಯದ ಮೇಲೆ ಬೆಳಕು ಚೆಲ್ಲುವ ಜತೆಗೆ ಅವು ಕೊನೆಯಾಗಬೇಕೆಂದು ಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದು ಹೇಳಿದರು.

ಕಲಾವಿದ ದುಂಡಯ್ಯ ಮಾತನಾಡಿ, ಕೋವಿಡ್‌ ಸಮಯದಲ್ಲಿ ನಾನು ಗಾರೆಕೆಲಸ ಮಾಡಿ, ಹಲವು ಕ್ಷೇತ್ರದ ಉದ್ಯೋಗಿಗಳು ಹಾಗೂ ಜನ ಸಾಮಾನ್ಯರ ಬದುಕು ಹೈರಾಣಾಗಿತ್ತು. ಇವೆಲ್ಲನ್ನು ಸೇರಿಸಿ ಪ್ರಸ್ತುತ ಸಮಾಜದಲ್ಲಿನ ಮುಖವಾಡದ ಬದುಕು ಮತ್ತು ಹೆಣ್ಣಿನ ಮೇಲೆ ಆಗುತ್ತಿರುವ ಶೋಷಣೆಯನ್ನು ಬಣ್ಣದ ರೂಪದಲ್ಲಿ ಜನರಿಗೆ ಮುಟ್ಟಿಸಿದ್ದೇನೆ ಎಂದು ತಿಳಿಸಿದರು.

ಪದರ್ಶನದಲ್ಲಿ ಹಲವು ಚಿತ್ರಕಲೆಗಳು ಹೆಣ್ಣಿನ ಶೋಷಣೆ, ಜಗತ್ತಿನಲ್ಲಿ ಹೆಜ್ಜೆ ಹೆಜ್ಜೆಗೂ ಆಗುವ ಶೋಷಣೆ ನಿಲ್ಲಬೇಕು, ಸಮಾಜದಲ್ಲಿನ ಮುಖವಾಡದ ಬದುಕು, ಕೊರೊನಾ ಕಾಲದ ಜನರ ಬವಣೆ ಮತ್ತು ತಲ್ಲಣಗಳ ಬಗ್ಗೆ ಬೆಳಕು ಚೆಲ್ಲಿದವು. ಚಿತ್ರಕಲಾ ಪ್ರದರ್ಶನ ಜ.12 ವರೆಗೂ ಇರಲಿದೆ. ಕಾರ್ಯಕ್ರಮದಲ್ಲಿ ಅನುದಾನರಹಿತ ಶಾಲಾ ಕಾಲೇಜಿನ ಸಂಘದ ಅಧ್ಯಕ್ಷಪಿ.ಎಸ್‌.ರಾಜಶೇಖರ್‌ ಮೂರ್ತಿ, ಕಲಾವಿದರಾದ ಸಿ.ಚಿಕ್ಕಣ, ಪರಮೇಶ್ವರ, ಡಾ.ವಿಠuಲರೆಡ್ಡಿ ಎಫ್. ಚುಳಕಿ, ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next