Advertisement

ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ

05:00 PM Jun 19, 2018 | Team Udayavani |

ಯಾದಗಿರಿ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸುಧಾರಣೆ ಕಾಣಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.

Advertisement

ಮಿನಿ ವಿಧಾನಸೌಧ ಆವರಣದಲ್ಲಿ 2018-19ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಅಭಿಯಾನದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಕೃಷಿ ಇಲಾಖೆ ಯೋಜನೆಗಳ ಸಮಗ್ರ ಮಾಹಿತಿ ಹೊತ್ತ ಕೃಷಿ ರಥ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಶ್ರೀ ಬಸರೆಡ್ಡಿಗೌಡ ಮಾಲಿ ಪಾಟೀಲ ಅನಪುರ, ಹತ್ತಿಕುಣಿ ಜಿಪಂ ಸದಸ್ಯ ಶ್ರೀ ಶಿವಲಿಂಗಪ್ಪ ಪುಟಗಿ, ಯರಗೋಳ ಜಿಪಂ ಸದಸ್ಯೆ ಶ್ರೀಮತಿ ಅನಿತಾ ಸುರೇಶ, ಜಿಲ್ಲಾಧಿಕಾರಿ ಜೆ. ಮಂಜುನಾಥ, ಜಿಪಂ ಉಪ ಕಾರ್ಯದರ್ಶಿ ವಸಂತರಾವ್‌ ಕುಲಕರ್ಣಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಆರ್‌. ದೇವಿಕಾ ವಿವಿಧ ಯೋಜನೆಗಳ ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಿದರು.

ಜಿಲ್ಲೆಯ ರೈತ ಮುಖಂಡರು, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಹಾಜರಿದ್ದರು. ಈ ವೇಳೆ ಜಂಟಿ ಕೃಷಿ ನಿದೇರ್ಶಕರು ಮಾಹಿತಿ ನೀಡಿ, ಕೃಷಿ ಮತ್ತು ಕೃಷಿಗೆ ಸಂಬಂಧಿ ಸಿದ ಇತರೆ ಇಲಾಖೆಗಳ ಸಮಗ್ರ ಮಾಹಿತಿನ್ನೊಳಗೊಂಡ ರಥವು ಜಿಲ್ಲೆಯ ಹದಿನಾರು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಕೃಷಿ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಯೊಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಸಂಚರಿಸಲಿದೆ.

ಮೂರನೇ ದಿನ ಹೋಬಳಿಯ ಕೇಂದ್ರ ಸ್ಥಾನದಲ್ಲಿ ಕೃಷಿಗೆ ಸಂಬಂಧಿ ಸಿದ ಸಾಕ್ಷ್ಯ ಚಿತ್ರಗಳ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ಇರಲಿದ್ದು, ರೈತರು ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

Advertisement

ಯಾದಗಿರಿ ತಾಲೂಕಿನ ಬಳಿಚಕ್ರ, ಸೈದಾಪುರ, ಕೊಂಕಲ್‌, ಹತ್ತಿಕುಣಿ ಹಾಗೂ ಗುರುಮಠಕಲ್‌ ಹೋಬಳಿ, ಸುರಪುರ ತಾಲೂಕಿನ ಕೆಂಭಾವಿ, ಹುಣಸಗಿ, ಕಕ್ಕೇರಾ, ಕೊಡೇಕಲ್‌, ಸುರಪುರ ಹೋಬಳಿ ಹಾಗೂ ಶಹಾಪುರ ತಾಲೂಕಿನ ದೋರನಹಳ್ಳಿ, ಗೋಗಿ, ಹೈಯಾಳ. ಬಿ, ಶಹಾಪುರ ಹಾಗೂ ವಡಗೇರಾ ಹೋಬಳಿಗಳಲ್ಲಿ ಜಾಗೃತಿ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next