Advertisement

ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಕೋಟೆಯಲ್ಲಿ ಚಾಲನೆ

01:54 AM May 20, 2019 | Team Udayavani |

ಮಡಿಕೇರಿ :ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಪ್ರಯುಕ್ತ ಸರಕಾರಿ ವಸ್ತುಸಂಗ್ರಹಾಲಯ ವತಿಯಿಂದ ಶನಿವಾರ ನಗರದ ಕೋಟೆ ಆವರಣದಲ್ಲಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಉದ್ಘಾಟಿಸಿದರು.

Advertisement

ಕ್ರಿ.ಶ. 1730 ರಿಂದ ಕ್ರಿ.ಶ .1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಚಿತ್ರಗಳ ಪ್ರದರ್ಶನವು ಎರಡು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು, ಪ್ರವಾಸಿಗರು ವೀಕ್ಷಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆ ಬಿಂಬಿಸುವ ಅನೇಕ ಸ್ಥಳಗಳಿದ್ದು, ಅವುಗಳ ಬಗ್ಗೆ ಮಾಹಿತಿಗಳು ಈ ಛಾಯಾಚಿತ್ರ ಪ್ರದರ್ಶನದಲ್ಲಿ ದೊರೆಯಲಿವೆ ಎಂದು ಅವರು ತಿಳಿಸಿದರು.

ಸರಕಾರಿ ವಸ್ತು ಸಂಗ್ರಹಾಲಯದ ಅಧಿಕಾರಿ ಬಿ.ಪಿ. ರೇಖಾ ಮಾತ ನಾಡಿ, ಸುಮಾರು 28 ಸಾಂಸ್ಕೃತಿಕ ಹಾಗೂ ಪಾರಂಪರಿಕ ಛಾಯಾಚಿತ್ರಗಳನ್ನು ಇಡ ಲಾಗಿದೆ ಎಂದು ಅವರು ತಿಳಿಸಿದರು.

ಪ್ರದರ್ಶನದಲ್ಲಿ ಕ್ರಿ.ಪೂ. 1000- 600 ವರ್ಷಗಳ ಇತಿಹಾಸವುಳ್ಳ ಸೋಮವಾರ ಪೇಟೆಯ ಹೆಗ್ಗಡೆಹಳ್ಳಿಯಲ್ಲಿ ಉತVನ® ‌ವಾದ ನೆಲೆಯ ಐತಿಹಾಸಿಕ ಚಿತ್ರ, ಕ್ರಿ.ಪೂ 3 ಸಾವಿರ ವರ್ಷಗಳ ಸೋಮವಾರ ಪೇಟೆಯಲ್ಲಿ ಉತVನನವಾದ ದೊಡ್ಡಮಳೆ¤ ಹಳೆಯ ಚಿತ್ರ, ಕ್ರಿ.ಶ.1792ರ ನಾಲ್ಕುನಾಡು ಅರಮನೆಯ ಚಿತ್ರ, ಕ್ರಿ.ಶ. 10-11ನೇ ಶತ ಮಾನದ ಜೈನ ದೇವಾಲಯಗಳ, ಐತಿ ಹಾಸಿಕ ಛಾಯಾಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next