Advertisement

Pavanje ಮೇಳದ ತಿರುಗಾಟಕ್ಕೆ ಚಾಲನೆ: ಯಕ್ಷಗಾನದಿಂದ ಸಾಂಸ್ಕೃತಿಕ ಸಮೃದ್ಧಿ: ಐಕಳ

11:27 PM Nov 24, 2023 | Team Udayavani |

ಹಳೆಯಂಗಡಿ: ಯಕ್ಷಗಾನ ಕಲೆಯು ಸಂಸ್ಕೃತಿಯ ಸಮೃದ್ಧಿಗೆ ಕಾರಣವಾಗಿದೆ. ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸಾûಾತ್ಕರಿಸುವ ಮೂಲಕ ಕಲೆಯನ್ನು ಉಳಿಸುವಂತೆ ಮಾಡಲಾಗುತ್ತಿದೆ. ಧಾರ್ಮಿಕ ಕ್ಷೇತ್ರಗಳಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ಸಿಕ್ಕಲ್ಲಿ ಇನ್ನಷ್ಟು ಎತ್ತರಕ್ಕೆ ಹಾಗೂ ಕಲಾವಿದರಿಗೆ ಆಸರೆಯಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಹೇಳಿದರು.

Advertisement

ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಾಲ್ಕನೇ ವರುಷದ ಯಾನಾರಂಭಕ್ಕೆ ಚಾಲನೆ ನೀಡಿ ಅವರು ಶುಭ ಹಾರೈಸಿದರು.

ಮೇಳಕ್ಕೆ ಸ್ವರ್ಣ ಕಿರೀಟವನ್ನು ಸೇವಾ ರೂಪದಲ್ಲಿ ನೀಡಿರುವ ಹಿರಿಯ ಸಮಾಜ ಸೇವಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಶುಭಾಶಂಸನೆಗೈದರು.

ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್‌ ಕಲಾವಿದರನ್ನು ಹಾಗೂ ಮೇಳಕ್ಕೆ ಸಹಕರಿಸಿದ ದಾನಿಗಳನ್ನು, ಗಣ್ಯರನ್ನು ಕ್ಷೇತ್ರದ ಪರವಾಗಿ ಗೌರವಿಸಿದರು. ಧರ್ಮದರ್ಶಿ ಡಾ| ಯಾಜಿ ಎಚ್‌. ನಿರಂಜನ ಭಟ್‌ ಗೆಜ್ಜೆ ಕಟ್ಟುವ ಸಂಪ್ರದಾಯವನ್ನು ನಡೆಸಿಕೊಟ್ಟರು.

“ಪಾಂಡವಾಶ್ವಮೇಧ’ ಬಯಲಾಟ ಪ್ರದರ್ಶನಗೊಂಡಿತು. ಮೇಳದ ಪ್ರಧಾನ ಭಾಗವತರು ಹಾಗೂ ಸಂಚಾಲಕ ಪಟ್ಲ ಸತೀಶ್‌ ಶೆಟ್ಟಿ ಅವರು ಸ್ವಾಗತಿಸಿದರು.

Advertisement

ನ.24ರಿಂದ 2024ರ ಮೇ 25ವರೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕೇರಳ ಸಹಿತ 180ಕ್ಕಿಂತಲೂ ಹೆಚ್ಚು ಯಕ್ಷಗಾನ ಸೇವೆಯಾಟ ನಡೆಯಲಿದೆ. ವಿಶೇಷವಾಗಿ ಕಲಾವಿದರ ಸಂಚಾರಕ್ಕಾಗಿ ಬಸ್‌ನನ್ನು ದಾನಿಯೊಬ್ಬರು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

ದೇವಸ್ಥಾನದ ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್‌, ಗಣ್ಯರಾದ ನರೇಂದ್ರ ಶೆಟ್ಟಿ ಸೌದಿ, ಸುದೇಶ್‌ ಕುಮಾರ್‌ ರೈ, ಅಡ್ಯಾರ್‌ ಪುರುಷೋತ್ತಮ ಭಂಡಾರಿ, ಜಯರಾಂ ಶೇಖ, ಮಹಾವೀರ್‌ ಪಾಂಡ್ಯ, ಎಂ.ಎಲ್‌. ಸಾಮಗ, ಸುಧಾಕರ ಪೂಂಜ ಸುರತ್ಕಲ್‌, ಭುಜಬಲಿ ಧರ್ಮಸ್ಥಳ, ವಿಜಯ ಶೆಟ್ಟಿ ಕಾರ್ಕಳ, ಅರತಿ ಅಳ್ವ, ಬಾಳ ಜಗನ್ನಾಥ ಶೆಟ್ಟಿ, ಗಿರೀಶ್‌ ಶೆಟ್ಟಿ, ಪೂರ್ಣಿಮಾ ಶಾಸ್ತ್ರಿ, ಸುಜಾತಾ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next