Advertisement
ಕೆಎಂಸಿ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ದೂರದ ಜಿಲ್ಲೆಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಜನೆಯ ಮೂಲಕ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಟ್ ಶ್ಲಾಘಿಸಿದರು.
Related Articles
Advertisement
ಸಹ ಕುಲಪತಿ ಡಾ| ವೆಂಕಟರಾಯ ಎಂ. ಪ್ರಭು ಅವರು ಮಣಿಪಾಲ ಆರೋಗ್ಯಕಾರ್ಡ್ 2022ರ ಮಾಹಿತಿ ಕರ ಪತ್ರ ಬಿಡುಗಡೆ ಮಾಡಿದರು.
ಮಣಿಪಾಲ ಕೆಎಂಸಿ ಡೀನ್ ಡಾ| ಶರತ್ ಕೆ. ರಾವ್ ಸ್ವಾಗತಿಸಿ, ಮಂಗಳೂರು ಕೆಎಂಸಿ ಡೀನ್ ಡಾ| ಬಿ. ಉಣ್ಣಿಕೃಷ್ಣನ್ ವಂದಿಸಿದರು. ಕೃಷ್ಣ ಪ್ರಸಾದ್ ನಿರೂಪಿಸಿದರು.
ಕಾರ್ಡ್‌ನ ಸೌಲಭ್ಯಗಳುಈ ಕಾರ್ಡ್ ಹೊಂದಿರುವವರಿಗೆ ತಜ್ಞಮತ್ತು ವಿಶೇಷ ತಜ್ಞ ವೈದ್ಯರ ಸಮಾ ಲೋಚನೆ ಶುಲ್ಕದಲ್ಲಿ ಶೇ. 50ರ ರಿಯಾಯಿತಿ (ಒಪಿಡಿ/ನಾನ್ ಒಪಿಡಿ), ಹೊರರೋಗಿ ಪ್ರಯೋಗಾಲಯ ಪರೀಕ್ಷೆ ಶೇ. 30ರ ರಿಯಾಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು (ಸಿಟಿ, ಎಂಆರ್‌ಐ, ಅಲ್ಟ್ರಾಸೌಂಡ್ ಇತ್ಯಾದಿ), ಶೇ. 20ರ ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ. 20ರ ರಿಯಾಯಿತಿ, ಹೊರರೋಗಿ ಡಯಾಲಿಸಿಸ್ 100 ರೂ., ಔಷಧಾಲಯಗಳಲ್ಲಿ ಶೇ. 12ರ ವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡ್‌ನಲ್ಲಿ ಒಳರೋಗಿ ಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇ. 25ರ ರಿಯಾಯಿತಿ ದೊರೆಯಲಿದೆ. ಶುಲ್ಕ ವಿವರ
1 ವರ್ಷದ ಯೋಜನೆಯಲ್ಲಿ ಸದಸ್ಯತ್ವ ಒಬ್ಬರಿಗೆ 300 ರೂ., ಕೌಟುಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ 600 ರೂ. ಮತ್ತು ಕುಟುಂಬ ಪ್ಲಸ್ ಯೋಜನೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ, ಮಾವ) 750 ರೂ., ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ., ಕುಟುಂಬಕ್ಕೆ 800 ರೂ. ಮತ್ತು ಕೌಟುಂಬಿಕ ಪ್ಲಸ್ ಯೋಜನೆಗೆ 950 ರೂ. ಆಗಿರುತ್ತದೆ. ಸೌಲಭ್ಯ ಎಲ್ಲಿ ಲಭ್ಯ?
ಮಣಿಪಾಲ, ಕಾರ್ಕಳ, ಮಂಗಳೂರು, ಗೋವಾ, ಕಟೀಲಿನಲ್ಲಿ ರುವ ಮಣಿಪಾಲ ಗುಂಪಿನ ಆಸ್ಪತ್ರೆಗಳಲ್ಲಿ ಪ್ರಯೋಜನ ಪಡೆಯಬಹುದು. ಸಾರ್ವಜನಿಕರು ಆರೋಗ್ಯಕಾರ್ಡ್ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 0820 – 2923748ಕ್ಕೆ ಕರೆ ಮಾಡಬಹುದು.