Advertisement

Loksabha ಸಮರಕ್ಕೆ ವಿದ್ಯುಕ್ತ ಚಾಲನೆ: 1ನೇ ಹಂತಕ್ಕೆ ಅಧಿಸೂಚನೆ ಪ್ರಕಟ

12:47 AM Mar 21, 2024 | Team Udayavani |

ಹೊಸದಿಲ್ಲಿ: ಎಪ್ರಿಲ್‌ 19ರಂದು ನಡೆಯ ಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತಕ್ಕೆ ಚುನಾವಣ ಆಯೋಗವು ಬುಧವಾರ ಅಧಿಸೂಚನೆ ಹೊರಡಿಸಿದೆ. 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫ‌ಲಿತಾಂಶವು ಜೂನ್‌ 4ಕ್ಕೆ ಪ್ರಕಟವಾಗಲಿದೆ.
ನಾಮಪತ್ರ ಸಲ್ಲಿಸಲು ಮಾ.27 ಕೊನೆಯ ದಿನವಾಗಿದೆ. ನಾಮ ಪತ್ರ ಪರಿಶೀಲನೆ ಮಾ.28ಕ್ಕೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಮಾ.30 ಕೊನೆಯ ದಿನವಾಗಿದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ದಿನಾಂಕಗಳು ಪರಿಷ್ಕೃತ ಗೊಂಡಿವೆ. ನಾಮಪತ್ರ ಸಲ್ಲಿಸಲು ಮಾ.28 ಕೊನೆಯ ದಿನವಾಗಿದ್ದರೆ, ನಾಮಪತ್ರ ಪರಿಶೀಲನೆ ಮಾ.30ರಂದು ನಡೆಯಲಿದೆ. ನಾಮ ಪತ್ರ ವಾಪಸ್‌ ಪಡೆಯಲು ಎಪ್ರಿಲ್‌ 2 ಕೊನೆಯ ದಿನವಾಗಿದೆ.

Advertisement

ಎಲ್ಲೆಲ್ಲಿ ಚುನಾವಣೆ?
ಮೊದಲ ಹಂತದಲ್ಲಿ ಅರುಣಾಚಲ(2), ಅಸ್ಸಾಂ(5), ಬಿಹಾರ(4), ಛತ್ತೀಸ್‌ಗಢ(1), ಮಧ್ಯ ಪ್ರದೇಶ(2), ಮಿಜೋರಾಂ (1), ನಾಗಾಲ್ಯಾಂಡ್‌(1), ರಾಜಸ್ಥಾನ(12), ಸಿಕ್ಕಿಂ(1), ತಮಿಳುನಾಡು(39), ತ್ರಿಪುರಾ(1), ಉತ್ತರ ಪ್ರದೇಶ(8), ಉತ್ತರಾಖಂಡ(5), ಪಶ್ಚಿಮ ಬಂಗಾಲ(3) ರಾಜ್ಯಗಳಲ್ಲಿ ಮತದಾನ ನಡೆಯಲಿದೆ.

ಅರುಣಾಚಲ, ಸಿಕ್ಕಿಂ ವಿಧಾನಸಭೆಗೆ ಚುನಾವಣೆ
ಇದೇ ವೇಳೆ, ಅರುಣಾಚಲ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಾಗಿ ರಾಜ್ಯ ಚುನಾವಣ ಕಚೇರಿಯು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಅರುಣಾಚಲ ಪ್ರದೇಶ 60 ವಿಧಾನಸಭೆ ಕ್ಷೇತ್ರಗಳು ಮತ್ತು 2 ಲೋಕಸಭೆ ಹಾಗೂ ಸಿಕ್ಕಿಂನ 32 ವಿಧಾನಸಭೆ ಕ್ಷೇತ್ರಗಳಿಗೆ ಎ.19ರಂದು ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next