Advertisement

2ನೇ ಹಂತದ ಬೆಂಗಳೂರುರಕ್ಷಿಸಿ ಅಭಿಯಾನಕ್ಕೆ ಚಾಲನೆ

12:11 PM Mar 27, 2018 | Team Udayavani |

ಬೆಂಗಳೂರು: ನಗರದ ಜನತೆ ನೆಮ್ಮದಿಯಿಂದ ಬದುಕಲಾಗದಂತಹ ವಾತಾವರಣ ನಿರ್ಮಿಸಿದ್ದೇ ಕಾಂಗ್ರೆಸ್‌ ಸಾಧನೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಆರೋಪಿಸಿದರು.

Advertisement

ಬಿಜೆಪಿಯಿಂದ ಎರಡನೇ ಹಂತದ “ಬೆಂಗಳೂರು ರಕ್ಷಿಸಿ’ ಅಭಿಯಾನಕ್ಕೆ ಸೋಮವಾರ ಶಾಂತಿನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ಜನತೆಗೆ ರಕ್ಷಣೆ ನೀಡುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫ‌ಲವಾಗಿದೆ. ಇದರಿಂದಾಗಿ ಅಪರಾಧಗಳು ಎಗ್ಗಿಲ್ಲದೇ ನಡೆದಿವೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆಯಲ್ಲಿದ್ದಾರೆ. ನಗರದ ನಾಗರಿಕರ ರಕ್ಷಣೆಗೆ ಯಾರೊಬ್ಬರೂ ಗಮನ ನೀಡುತ್ತಿಲ್ಲ. ಸಿಲಿಕಾನ್‌ ಸಿಟಿಯಾಗಿದ್ದ ಬೆಂಗಳೂರು ಅಪರಾಧಗಳ ನಗರವಾಗಿ ಮಾರ್ಪಟ್ಟಿದೆ. ಕೊಲೆ, ಸುಲಿಗೆ ಅವ್ಯಾಹತವಾಗಿ ನಡೆದಿದ್ದು, ಗೂಂಡಾಗಿರಿ ದೌರ್ಜನ್ಯಗಳು ಮಿತಿ ಮೀರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಸದ ಪಿ.ಸಿ.ಮೋಹನ್‌, ಶಾಸಕ ಎಸ್‌. ಮುನಿರಾಜು, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next