Advertisement

ಸ್ಯಾನಿಟೈಸ್‌ ಕಾರ್ಯಕ್ಕೆ ಪುರಸಭೆ ಅಧ್ಯಕ್ಷರಿಂದ ಚಾಲನೆ

06:48 PM Apr 30, 2021 | Team Udayavani |

ಮಧುಗಿರಿ: ಪಟ್ಟಣದಲ್ಲಿ ಅಗ್ನಿಶಾಮಕ ದಳದ ಸಹಕಾರದಿಂದ ಪುರಸಭೆನಡೆಸುತ್ತಿರುವ ಸ್ಯಾನಿಟೈಸ್‌ ಕಾರ್ಯಕ್ಕೆ ಪುರಸಭೆಯ ಅಧ್ಯಕ್ಷರೇ ಕೈಜೋಡಿಸಿದ್ದು,ಸ್ಯಾನಿಟೈಸರ್‌ ಗನ್‌ ಹಿಡಿದು ಸ್ವಚ್ಛಗೊಳಿಸಿದ ಘಟನೆ ನಡೆದಿದೆ.

Advertisement

ಪಟ್ಟಣದ ಪುರಸಭೆಯ ಅಧ್ಯಕ್ಷ ತಿಮ್ಮರಾಜು ಈ ಕೆಲಸಕ್ಕೆ ಕೈ ಹಾಕಿದ್ದು,ಗಂಟೆಗೂ ಹೆಚ್ಚು ಕಾಲ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸ್ಯಾನಿಟೈಸ್‌ ಗನ್‌ ಹಿಡಿದುಸಿಬ್ಬಂದಿಗೆ ನೆರವಾದರು.

ನಂತರ ಸುದ್ದಿಗಾರರೊಂದಿಗೆ ಪುರಸಭೆ ಅಧ್ಯಕ್ಷ ತಿಮ್ಮರಾಜು ಮಾತನಾಡಿ,ಎಲ್ಲದಕ್ಕೂ ಸರ್ಕಾರವನ್ನು ನಂಬಿ ಕೂರುವುದು ಬೇಡ. ಕನಿಷ್ಟ ಸಾರ್ವಜನಿಕರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಬೇಕು. ಅಗತ್ಯವಿದ್ದರೆ ಮಾತ್ರಓಡಾಡಿದರೆ ಅದೇ ಒಳ್ಳೆಯ ಸಹಕಾರ ಕೊಟ್ಟಂತೆ. ಈಗ ಪ್ರಮುಖ ಬೀದಿಗಳಲ್ಲಿ ಬೃಹತ್‌ ವಾಹನಗಳಲ್ಲಿ ಈ ಸ್ವತ್ಛತಾ ಕಾರ್ಯವನ್ನು ಮಾಡುತ್ತಿದ್ದು, ಪುರಸಭೆಯಪೌರಕಾರ್ಮಿಕರು ಸಣ್ಣದಾದ ಗಲ್ಲಿಗಳಲ್ಲಿಯೂ ಸ್ಯಾನಿಟೈಸಿಂಗ್‌ ಮಾಡುತ್ತಿದ್ದಾರೆ.ಪುರಸಭೆಯಿಂದ ಸಾಕಷ್ಟು ಜನಜಾಗೃತಿ ಕಾರ್ಯಗಳು ನಡೆಯುತ್ತಿದ್ದು,ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್‌, ಆರೋಗ್ಯ ನಿರೀಕ್ಷಕ ಬಾಲಾಜಿ ಹಾಗೂಅಗ್ನಿಶಾಮಕ ದಳದ ಕಾಂತರಾಜು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.