Advertisement
Related Articles
Advertisement
ಇದೇ ವೇಳೆ ದೃಶ್ಯಂ ಸಿನಿಮಾ ನೋಡಿ, ಅದೇ ಸ್ಫೂರ್ತಿಯಲ್ಲಿ ನಾಯಿಯೊಂದನ್ನು ಹೂತು ಹಾಕಿ , ಇಲ್ಲಿ ಯಾರನ್ನೋ ಹೂತು ಹಾಕಿದ್ದಾರೆ ಎಂದು ಸುದ್ದಿ ಹಬ್ಬಿಸಿ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ. ಪೊಲೀಸರು ಬಂದು ಗುಂಡಿ ತೆರೆದಾಗ ನಾಯಿಯ ಕಳೇಬರ ಪತ್ತೆಯಾಗಿ ಪ್ರಕರಣದ ದಿಕ್ಕು ತಪ್ಪಿ ಹೋಗಲು ಕಾರಣವಾಗಿತ್ತು.
ಪ್ರಕರಣದ ತನಿಖೆಗಿಳಿದ ಪೊಲೀಸರು ಕಟೋರಿಯಾ ಮತ್ತು ಮೂವರು ಪುತ್ರರಿಗೆ ಬ್ರೇನ್ ಇಲೆಕ್ಟ್ರಿಕಲ್ ಆಸ್ಕಿಲೇಶನ್ ಸಿಗ್ನೇಚರ್ ಪರೀಕ್ಷೆಯನ್ನೂ ನಡೆಸಿದ್ದಾರೆ. ಇಂಧೋರ್‌ನಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಈ ಪರೀಕ್ಷೆ ಮಾಡಲಾಗಿದೆ.
ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಬಳೆ ಮತ್ತು ಇನ್ನೊಂದು ಆಭರಣ ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿದೆ ಎಂದು ಡಿಐಜಿ ತಿಳಿಸಿದ್ದಾರೆ.
ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರು ಕಟೋರಿಯಾ, ಮಾಜಿ ಬಿಜೆಪಿ ಶಾಸಕರ ಮನವಿ ಮೇಲೆ ಪೊಲೀಸ್ ಬೆಂಬಲ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ.