Advertisement

Gangavati: ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಶ್ರೀರಂಗದೇವರಾಯರ ಅಂತ್ಯಕ್ರಿಯೆಗೆ ಸೂಚನೆ

12:20 PM Aug 23, 2023 | Team Udayavani |

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಆನೆಗುಂದಿ ರಾಜ ವಂಶಸ್ಥರು ಮತ್ತು ಮಾಜಿ ಸಚಿವ ಶ್ರೀರಂಗದೇವರಾಯಲು ಅವರ ನಿಧನ ಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯದ ಆಡಳಿತ ಮತ್ತು ಶಿಷ್ಠಾಚಾರ ಅನುಷ್ಠಾನ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿ ಅಪೇಕ್ಷಾ ಸತೀಶ ಪವಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

Advertisement

ಗಂಗಾವತಿ ನಿವಾಸದಲ್ಲಿ ಶ್ರೀ ರಂಗದೇವರಾಯಲು ಮೃತದೇಹವನ್ನು ಬುಧವಾರ ಬೆಳ್ಳಿಗ್ಗೆ10 ಗಂಟೆಯ ವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಂಸದರಾದ ಎಚ್ ಜಿ ರಾಮುಲು,ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಎಂ. ಮಲ್ಲಿಕಾರ್ಜುನ್ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮನುವಳ್ಳಿ,ದಡೇಸೂಗೂರು ಬಸವರಾಜ, ಜಿ .ವೀರಪ್ಪ ,ಎಚ್.ಎಸ್ ಮುರಳಿದರ,ಮಾಜಿ ಎಂಎಲ್ಸಿ ಎಚ್.ಆರ್.ಶ್ರೀ ನಾಥ, ಆಪ್ತರಾದ ಬಾಪಿ ರೆಡ್ಡಿ ಕ್ಯಾಂಪ್ ಚಂಟಿರಾಜು,ಕೃಷ್ಙ, ಟಿ. ಸತ್ಯನಾರಾಯಣ , ಟಿ ರಾಮಚಂದ್ರ ,ಜಾನಕಿರಾಮ್ ,ಸಿ ರಾಮಕೃಷ್ಣ , ವಿಜಯಲಕ್ಷ್ಮಿ, ವಿಶ್ವನಾಥ ರಸಜು,ಸೇರಿದಂತೆ ಗಣ್ಯರು ವರ್ತಕರು ಮತ್ತು ರಂಗದೇವರಾಯಲು ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು.

ಆನೆಗೊಂದಿಯಲ್ಲಿ ನೀರವ ಮೌನ: ಶ್ರೀರಂಗದೇವರಾಯಲು ಅವರ ಸ್ವಗ್ರಾಮವಾದ ಆನೆಗೊದಿಯಲ್ಲಿ ರಾಜನನ್ನು ಕಳೆದುಕೊಂಡ ಜನರು ನೀರವ ಮೌನಕ್ಕೆ ಶರಣಾಗಿದ್ದು ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು ಬಂದಾಗಿವೆ.

Advertisement

ಮೆರವಣಿಗೆ: ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶ್ರೀರಂಗದೇವರಾಯಲು ಅವರ ಮೃತದೇಹದ ಶವಯಾತ್ರೆಯ ರಥದಲ್ಲಿ ಗಂಗಾವತಿ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಆನೆಗೊಂದಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು.

ಬುಧವಾರ ಸಂಜೆ 4:00ಗೆ ಕ್ಷತ್ರಿಯ ಧರ್ಮದ ನಿಯಮದಂತೆ ಅವರ ತೋಟದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಗೌರವ ವಂದನೆ ನಡೆಸಲಿದ್ದು ಜಿಲ್ಲಾಡಳಿತ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರಕಾರದ ಗೌರವ ಸಲ್ಲಿಸಲಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಶ್ರೀರಂಗದೇವರಾಯಲು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು .
ಜನಸಾಮಾನ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮೂಲಕ ಗಂಗಾವತಿ ಮತ್ತು ಕನಕಗಿರಿಯಲ್ಲಿ ಐದು ಬಾರಿ ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಅವರ ನಿಧನದಿಂದ ಕರ್ನಾಟಕ ರಾಜ್ಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆ .

ಅವರ ಕನಸಿನ ವಿಜಯನಗರ ಕಾಲುವೆಗಳ ದುರಸ್ತಿ ಸೇರಿದಂತೆ ಹಂಪಿ ಆನೆಗೊಂದಿ ಭಾಗದ ಸ್ಮಾರಕಗಳ ಸಂರಕ್ಷಣೆ ಕುರಿತು ಶ್ರೀರಂಗದವರಾಯಲು ವಿಶೇಷ ಕಾಳಜಿ ಹೊಂದಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ
-ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು.

ಇದನ್ನೂ ಓದಿ: Antilia bomb scare case: ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾಗೆ ಜಾಮೀನು

Advertisement

Udayavani is now on Telegram. Click here to join our channel and stay updated with the latest news.

Next