Advertisement

ರಸ್ತೆ ವಿಭಾಜಕದ ಸಸಿಗಳ ಪೋಷಣೆಗೆ ಹನಿ ನೀರಾವರಿ ವ್ಯವಸ್ಥೆಯಾಗಲಿ

08:04 AM Mar 17, 2019 | |

ರಸ್ತೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಗೂ ಗಿಡಮರಗಳನ್ನು ನೆಟ್ಟು ಪೋಷಿಸುವ ಸಲುವಾಗಿ ನಗರಗಳ ಬಹುತೇಕ ರಸ್ತೆ ವಿಭಜಕಗಳ ನಡುವೆ ಸಸಿಗಳನ್ನು ನೆಡಲಾಗಿದೆ. ಈ ಗಿಡಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್‌ಗಳ ಮೂಲಕ ನೀರು ಹಾಕಲಾಗುತ್ತಿದೆ. ಆದರೆ ಈ ಸುಡು ಬೇಸಿಗೆ ಕಾಲದಲ್ಲಿ ವಾರಕ್ಕೊಮ್ಮೆ ನೀರು ಹಾಕುವುದರಿಂದ ಕೆಲವೆಡೆ ಗಿಡಗಳಿಗೆ ನೀರು ಸಾಕಾಗದೆ ಗಿಡಗಳು ನಾಶವಾಗುತ್ತಿವೆ.

Advertisement

ಈ ಸಮಸ್ಯೆಗೆ ಪರ್ಯಾಯವಾಗಿ ಹನಿ ಹನಿ ನೀರು ಬೀಳುವ ಪೈಪ್‌ ಗಳನ್ನು ಅಳವಡಿಸಬಹುದಾಗಿದೆ. ದಿನಕ್ಕೆ ಇಷ್ಟು ಸಮಯ ಎಂದು ನಿಗದಿ ಪಡಿಸಿ ನೀರು ಬಿಡುವ ವ್ಯವಸ್ಥೆ ಮಾಡುವುದರಿಂದ ನಗರದ ರಸ್ತೆ ಡಿವೈಡರ್‌ ಗಳಲ್ಲಿರುವ ಗಿಡಗಳು ಹಚ್ಚ ಹಸುರಿನಿಂದ ಕಂಗೊಳಿಸಲು ಸಾಧ್ಯವಿದೆ.

ಸಾಮಾನ್ಯವಾಗಿ ಕೃಷಿ ತೋಟಗಳಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ರಸ್ತೆ ವಿಭಜಕದ ಮೇಲಿರುವ ಗಿಡಗಳ ಪೋಷಣೆಗೆ ಬಳಸಿದರೆ ಗಿಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ ಹಾಗೂ ನೀರು ಪೋಲಾಗುವುದು ತಡೆಯಬಹುದಾಗಿದೆ.

ಪ್ರಸ್ತುತ ಟ್ಯಾಂಕರ್‌ಗಳಲ್ಲಿ ತಂದು ವಿಭಾಜಕದ ಮೇಲಿರುವ ಗಿಡಗಳಿಗೆ ನೀರು ಸುರಿಯಲಾಗುತ್ತಿದೆ. ಇದರಿಂದ ನೀರು ಪೋಲಾಗುವ ಸಾಧ್ಯತೆ ಹೆಚ್ಚು. ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೃಷಿ, ಗಾರ್ಡನಿಂಗ್‌ಗಳಲ್ಲಿ ಬಳಸುವ ಹನಿ ನೀರಾವರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬಹುದು.

ವಿದೇಶಗಳಲ್ಲಿ ರಸ್ತೆಬದಿ ಹಾಗೂ ವಿಭಜಕ, ಗಾರ್ಡನ್‌ಗಳ ಸಸಿಗಳನ್ನು ಪೋಷಿಸುವ ನಿಟ್ಟಿನಲ್ಲಿ ಸ್ಪಿಂಕ್ಲರ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಇಲ್ಲಿ ಸ್ಪಿಂಕ್ಲರ್‌ ಅಳವಡಿಕೆ ಸಾಧ್ಯವಿಲ್ಲದಿದ್ದರೂ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಬಹುದಾಗಿದೆ. ಹೀಗಾಗಿ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಯೋಜನೆ ರೂಪಿಸಲು ಮುಂದಾಗಬೇಕಿದೆ.

Advertisement

ಪ್ರಜ್ಞಾ  ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next