ರಾಯಚೂರು: ಹೊಸ ವರ್ಷಾಚರಣೆಗೆ ಸರ್ಕಾರದ ನೈಟ್ ಕರ್ಫ್ಯೂ ಅಡ್ಡಿಯಾದರೆ, ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಕಿಡಿಗೇಡಿಗಳು ವರ್ಷಾಚರಣೆ ಮಾಡಿದ್ದಾರೆ.
ಕೇವಲ ಎಣ್ಣೆ ಪಾರ್ಟಿ ಮಾಡಿದ್ದಲ್ಲದೆ, ಕುಡಿದ ಮತ್ತಲ್ಲಿ ನಾನಾ ಅವಾಂತರ ಸೃಷ್ಟಿಸಿದ್ದಾರೆ. ಮದ್ಯದ ಪ್ಯಾಕೆಟ್, ಸಿಗರೇಟ್ ಪ್ಯಾಕೆಟ್ ಗಳನ್ನು ಅಲ್ಲಿಯೇ ಬಿಸಾಡಲಾಗಿದೆ. ಶಾಲೆಯ ಬೇಗ ಮುರಿದು ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಇದನ್ನೂ ಓದಿ:‘ಲಕಲಕ ಲ್ಯಾಂಬೋರ್ಗಿನಿ’ಯಲ್ಲಿ ರಚಿತಾ ರಾಮ್ ಮಿಂಚು: ಪುಟ್ಟ ಮಗಳ ಆಸೆ ಪೂರೈಸಿದ ತಂದೆ
ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಕಳವು ಮಾಡಲಾಗಿದೆ. ಬಿಸಿಯೂಟದ ಆಹಾರ ಪರಿಕರಗಳನ್ನೂ ಕದ್ದೊಯ್ದಿದ್ದಾರೆ. ಶಾಲಾವರಣದಲ್ಲಿ ಮದ್ಯದ ಬಾಟಲ್ ಗಳು, ಮಾಂಸದ ತುಂಡುಗಳು ಬಿಸಾಡಲಾಗಿದೆ. ಈ ಕುರಿತು ಶಾಲೆಯ ಮುಖ್ಯಶಿಕ್ಷಕ ಮಾನ್ವಿ ಠಾಣೆಗೆ ದೂರು ನೀಡಿದ್ದಾರೆ.