Advertisement

ಕೂಳೂರು ಬಳಿ ಕುಡಿಯುವ ನೀರು ರಾಜಕಾಲುವೆ ಪಾಲು ! 

08:19 PM Dec 16, 2021 | Team Udayavani |

ಕೂಳೂರು: ನಗರದ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಬೈಕ್‌ ಶೋ ರೂಂ ಎದುರು 4ನೇ ಮೈಲಿನಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ರಾಜಕಾಲುವೆ ಪಾಲಾಗುತ್ತಿದೆ.

Advertisement

ಒಂದೂವರೆ ತಿಂಗಳಿನಿಂದ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಚರಂಡಿಯ ಪಾಲಾ ಗುತ್ತಿದೆ. ಈ ಕುರಿತಂತೆ ಸ್ಥಳೀಯರು ಅನೇಕ ಬಾರಿ ಪಾಲಿಕೆಗೆ ಮಾಹಿತಿ ನೀಡಿ ದರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ನಗರದಲ್ಲಿ ಸದ್ಯ ಜಲಸಿರಿ ಯೋಜನೆಯ ಮುಖೇನ ದಿನದ 24 ಗಂಟೆ ನೀರು ಸರಬರಾಜು ಯೋಜನೆಯ ಕೆಲಸ ಪ್ರಗತಿಯಲ್ಲಿದೆ. ಹೀಗಿದ್ದಾಗ ಕೆಲವು ಕಡೆ ಈಗಿದ್ದ ಪೈಪ್‌ಲೈನ್‌ ಕೆಟ್ಟು ಹೋಗಿದ್ದು, ಅದರತ್ತ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ತತ್‌ಕ್ಷಣ ಸಮಸ್ಯೆ ಬಗೆಹರಿಸಿ:

ಸ್ಥಳೀಯರಾದ ಕೆ. ಜಯಕೃಷ್ಣನ್‌ ಪ್ರತಿಕ್ರಿಯಿಸಿ, “ಕೂಳೂರು ಬಳಿ ಅನೇಕ ದಿನಗಳಿಂದ ನೀರು ಪೋಲಾಗುತ್ತಿದ್ದು, ಈ ಬಗ್ಗೆ ಪಾಲಿಕೆ ಆಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರು ತತ್‌ಕ್ಷಣ ಸಮಸ್ಯೆ ಬಗೆಹರಿಸಬೇಕು’ ಎನ್ನುತ್ತಾರೆ.

ಮತ್ತೂಂದೆಡೆ ನಗರದ ವಿವಿಧೆಡೆ ಗೈಲ್‌ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿರುವ ಸಂದರ್ಭ ಬಹುತೇಕ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾದ ಘಟನೆ ಸಂಭವಿಸುತ್ತಿದೆ. ಕೊಡಿಯಾಲಬೈಲು, ಕಲಾಕುಂಜ, ಬೋಳೂರು, ಶಿವಬಾಗ್‌ ಸಹಿತ ನಗರದ ಕೆಲವು ಭಾಗದಲ್ಲಿ ಇಂತಹ ಸಮಸ್ಯೆ ಉದ್ಬವಿಸಿದ್ದು ಕುಡಿಯುವ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ.

Advertisement

ಕಾಮಗಾರಿ ನಡೆಸಲು ಸೂಚಿಸುವೆ:

ಮೇಯರ್‌ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿ, “ನೀರು ಪೋಲು ವಿಚಾರದ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿ ದ್ದೇನೆ. ನೀರು ಸರಬರಾಜಿನ ಪ್ರಮುಖ ಪೈಪ್‌ ಇದಾಗಿದ್ದು, ಕಾಮಗಾರಿ ನಡೆಸುವಾಗ ಕೆಲವು ದಿನಗಳ ಕಾಲ ಸುತ್ತಮುತ್ತಲಿನ ನೀರು ಸರಬ ರಾಜು ಸ್ಥಗಿತಗೊಳಿಸಬೇಕಾಗುತ್ತದೆ. ಈಗಾಗಲೇ ತುಂಬೆಯಲ್ಲಿ ಜ್ಯಾಕ್‌ವೆಲ್‌ ಕಾಮಗಾರಿ ನಡೆಯು ತ್ತಿದ್ದು, ನಗರಕ್ಕೆ ನೀರು ಬರುವ ಪ್ರಮಾಣವೂ ಕಡಿಮೆ ಇದೆ. ಆದರೂ ಕೂಡಲೇ ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next