Advertisement
ಮುನಿಯಾಲು ಪೇಟೆ ಹಾಗೂ ಸುತ್ತಮುತ್ತ ಲಿನ ನೂರಾರು ಜಾನುವಾರುಗಳು ಪ್ರತಿನಿತ್ಯ ಆಹಾರವನ್ನು ಅರಸುತ್ತ ಬರುತ್ತಿದ್ದು, ಇವು ಗಳಿಗೆ ಬೇಸಗೆಯ ಸಮಯದಲ್ಲಿ ದಾಹ ತೀರಿಸಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಇದನ್ನು ಗಮನಿಸಿದ ಪಂಚಾಯತ್ ಆಡಳಿತ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದೊಂದಿಗೆ ನೀರಿನ ತೊಟ್ಟಿ ನಿರ್ಮಿಸಿ ಇದಕ್ಕೆ ಪ್ರತೀ ದಿನ ನೀರು ತುಂಬಿಸುತ್ತಿದೆ. ಪರಿಸರದ ದನಗಳು, ಇತರೆ ಸಾಕು ಪ್ರಾಣಿಗಳು ಹಾಗೂ ಸುತ್ತಲಿನ ಪಕ್ಷಿಗಳು, ಕಾಡು ಪ್ರಾಣಿಗಳು ಈ ತೊಟ್ಟಿಯಿಂದ ಈಗಾಗಲೇ ನೀರನ್ನು ಕುಡಿಯಲು ಪ್ರಾರಂಭಿಸಿವೆ.
ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ತೊಟ್ಟಿಯನ್ನು ರಚನೆ ಮಾಡಲಾಗಿದ್ದು ಇದೀಗ ಪ್ರತೀನಿತ್ಯ ನೂರಾರು ದನಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಈ ತೊಟ್ಟಿಯ ನೀರನ್ನು ಕುಡಿಯುತ್ತಿವೆ.
-ಸದಾಶಿವ ಸೇರ್ವೆಗಾರ್, ಪಿಡಿಒ ಗ್ರಾ.ಪಂ. ವರಂಗ
Related Articles
ಬೇಸಗೆಯಲ್ಲಿ ನೀರಿನ ಮೂಲ ಇಲ್ಲದೆ ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ಬರುವ ಪರಿಸ್ಥಿತಿಯನ್ನು ಗಮನಿಸಿದ ಪಂಚಾಯತ್ ಆಡಳಿತ ಈ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಿ ಪ್ರತೀನಿತ್ಯ ನೀರು ತುಂಬಿಸುವ ಕಾರ್ಯ ಮಾಡುತ್ತಿದೆ. ಇದು ಪರಿಸರದ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಸಹಕಾರಿ.
-ಸುರೇಂದ್ರ ಶೆಟ್ಟಿ,
ಅಧ್ಯಕ್ಷರು ಗಾ.ಪಂ. ವರಂಗ
Advertisement