ಸದ್ಯ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಧೇನು ಎಂದೇ ಗುರುತಿಸಿಕೊಂಡ ಕಾರಂಜಾ ಜಲಾಶಯದ ನೀರು ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಪೋಲಾಗುತ್ತಿರುವುದು ಸಹಜ ಎನ್ನುವಂತಾಗಿದೆ.
Advertisement
ಕಾರಂಜಾ ಜಲಾಶಯದಿಂದ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ಪೈಪ್ ಲೈನ್ ಮೂಲಕ ನೀರು ಹರಿಸುವ ಕಾರ್ಯ ನಡೆಯುತ್ತಿದೆ. ಆದರೆ, ಪದೇಪದೆ ಪೈಪ್‌ಲೈನ್ ಸಮಸ್ಯೆಯಿಂದ ಭಾರಿ ಪ್ರಮಾಣದ ನೀರು ಪೋಲಾಗುತ್ತಿದೆ. ತಿಂಗಳ ಹಿಂದೇ ಬೀದರ್-ಹುಮನಾಬಾದ ಮಾರ್ಗ ಮಧ್ಯದ ಹಾಲಹಳ್ಳಿಸಮೀಪದಲ್ಲಿ ಕಾರಂಜಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಪೋಲಾಗುತ್ತಿತ್ತು. ನಂತರ ಸಂಗೋಳಗಿ ಸಮೀಪ, ಶಮಶಾನಗರ ಸಮೀಪದಲ್ಲಿ ಕೂಡ ನೀರು ಪೋಲಾಗಿತ್ತು. ಇದೀಗ ಬೀದರ್ ತಾಲೂಕಿನ ಕಮಠಾಣಾ ಸಮೀಪದಲ್ಲಿ ಪೈಪ್ ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲಾಗುತ್ತಿದೆ.
ಕಂಗನಕೋಟೆ, ಕಮಠಾಣಾಗೆ ಸರಬರಾಜಾಗುವ ಪೈಪ್‌ಲೈನ್ ಕಮಠಾಣಾ ಗ್ರಾಮದ ಬಳಿ ಒಡೆದು ಹೋಗಿದೆ. ಇದರಿಂದ ದಿನನಿತ್ಯ ಸಾಕಷ್ಟು ನೀರು ಪೋಲಾಗುತ್ತಿದೆ. ಪೈಪ್ ಒಡೆದ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ, ಸಂಬಂಧಿ ಸಿದ ಸಿಬ್ಬಂದಿ ಈ ಕಡೆ ಗಮನಹರಿಸುತ್ತಿಲ್ಲ. ಕನಿಷ್ಠ ಕಮಠಾಣಾ ಪಂಚಾಯತ್ ಸಿಬ್ಬಂದಿ ಕೂಡ ನೀರು ಪೋಲಾಗುತ್ತಿರುವ ಕುರಿತು ಸಂಬಂಧಿಸಿದ ಇಲಾಖೆ
ಅ ಧಿಕಾರಿಗಳಿಗೂ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಗ್ರಾಮದಲ್ಲಿ ವಾಸಿಲು ಸೂಚನೆ: ಬೇಸಿಗೆ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಧಿಕಾರಿಗಳು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ವಾಸ ಮಾಡಬೇಕು. ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರ್ತವ್ಯ ಲೋಪ ಮಾಡಿರುವ ಜಿಲ್ಲೆಯ 47 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೆ, ಈಗಾಗಲೇ 16 ಪಿಡಿಒಗಳನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದು, ಭಾಲ್ಕಿ ತಾಲೂಕಿನ ತೇಗಂಪೂರ್ ಗ್ರಾಮದಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Related Articles
ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ಗ್ರಾಮದಲ್ಲಿ ನೀರಿನ ಸಂಗ್ರಹ ಇರುವ ಖಾಸಗಿ ಕೊಳವೆ ಬಾವಿ, ತೆರೆದ ಬಾವಿ ಪರಿಶೀಲಿಸಲಾಗುತ್ತಿದೆ. ಭೂ ಗರ್ಭ
ತಜ್ಞರ ಮಾಹಿತಿ ಪ್ರಕಾರ ವಿವಿಧೆಡೆ ಕೊಳವೆ ಬಾವಿಗಳನ್ನು ಕೊರೆಸುವ ಕಾರ್ಯ ನಡೆಯುತ್ತಿದೆ. ನಮ್ಮ ಎಲ್ಲಾ ಯೋಜನೆಗಳು ವಿಫಲಗೊಂಡ
ಸಂದರ್ಭದಲ್ಲಿ ಮಾತ್ರ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುವುದು.
ಮಹಾಂತೇಶ ಬೀಳಗಿ. ಜಿಲ್ಲಾಪಂಚಾಯತ ಸಿಇಒ
Advertisement
ಕುಡಿಯುವ ನೀರಿಗೆ ಪ್ರತಿಯೊಬ್ಬರು ಮಹತ್ವ ನೀಡಬೇಕು. ಎಲ್ಲಿಯಾದರೂ ನೀರು ಪೋಲಾಗುತ್ತಿದ್ದರೆ ಕೂಡಲೆ ಅಧಿಕಾರಿಗಳ ಗಮನಕ್ಕೆ ತರುವ ಕಾರ್ಯವನ್ನು ಸಾರ್ವಜನಿಕರು ಮಾಡಬೇಕು. ಕಮಠಾಣಾ ಗ್ರಾಮದ ಸಮೀಪದಲ್ಲಿ ನೀರು ಪೋಲಾಗುತ್ತಿರುವ ಕುರಿತು ಅಧಿಕಾರಿಗಳು ಕೂಡಲೇ ಭೇಟಿ ನೀಡಿ ನೀರು ಪೋಲಾಗದಂತೆ ತಡೆಯುವಂತೆ ಸೂಚಿಸಲಾಗುವುದು. ಔರಾದ ಪಟ್ಟಣಕ್ಕೆ ಕಾರಂಜಾ ಜಲಾಶಯದ ನೀರು ಪೂರೈಕೆ ಮಾಡುವಂತೆ ಔರಾದ ಶಾಸಕರು ಪತ್ರ ಬರೆದಿದ್ದಾರೆ. ಆದರೆ, ಕಾರಂಜಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಜಲಾಶಯದಿಂದ ಔರಾದವರೆಗೆ ಹರಿದು ಹೋಗುವ ನೀರು ಹೆಚ್ಚಾಗಿ ಹಾಳಾಗುವ ಸಾಧ್ಯತೆ ಇದ್ದು, ಈ ಕುರಿತು ಪರಿಶೀಲಿಸಲಾಗುತ್ತಿದೆ.ಡಾ| ಎಚ್.ಆರ್. ಮಹಾದೇವ, ಜಿಲ್ಲಾಧಿಕಾರಿ ದುರ್ಯೋಧನ ಹೂಗಾರ