Advertisement
ತೋಪ್ಲುವಿನಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿನ ಹೆಚ್ಚಿನ ಎಲ್ಲ ಮನೆಗಳಲ್ಲಿ ನೀರಿನ ಸಮಸ್ಯೆಯಿದೆ. ಬಾವಿಯಲ್ಲಿ ನೀರಿದ್ದರೂ ಕೆಲವು ಕಡೆ ಉಪ್ಪು ನೀರು. ಮತ್ತೆ ಕೆಲವು ಬಾವಿಗಳ ನೀರು ತಳ ಹಿಡಿದ್ದರಿಂದ ಬಳಕೆ ಯೋಗ್ಯವಿಲ್ಲದಂತಾಗಿದೆ.
ನಮಗೆ ಕಳೆದ ವರ್ಷ ಪಂಚಾಯತ್ ವತಿಯಿಂದ ಟ್ಯಾಂಕರ್ ನೀರು ಕೊಡುತ್ತಿದ್ದರು. ಆದರೆ ಈ ಸಲ ಇಲ್ಲಿನ ಮನೆ- ಮನೆಗಳಿಗೆ ಪೈಪ್‌ಲೈನ್ ಮಾಡಿಸಿ ನಳ್ಳಿ ಹಾಕಿಸಿಕೊಟ್ಟಿದ್ದಾರೆ. ಆದರೆ ಆ ನಳ್ಳಿಯಲ್ಲಿ ಕೊನೆಯಲ್ಲಿರುವ ನಮ್ಮ ಮನೆ ಕಡೆಗಳಿಗೆ ನೀರೇ ಬರುವುದಿಲ್ಲ. ಬಾವಿಯಲ್ಲಿ ನೀರಿದ್ದರೂ ಅದು ಅಷ್ಟೇನು ಒಳ್ಳೆಯದಿಲ್ಲ. ಅಡುಗೆಗೆ, ಕುಡಿಯಲು ಬಳಸಲು ಸಾಧ್ಯವಿಲ್ಲ. ಆದರೂ ಬಟ್ಟೆ ಒಗೆಯಲು ಇನ್ನಿತರ ಕಾರ್ಯಕ್ಕೆ ಅನಿವಾರ್ಯವಾಗಿ ಅದನ್ನೇ ಬಳಸುತ್ತಿದ್ದೇವೆ ಎನ್ನುತ್ತಾರೆ ತೋಪುÉವಿನ ಪಡುವಿನ ತುದಿಯ ನಿವಾಸಿ ಜಯಶ್ರೀ. 2-3 ಕೊಡ ನೀರು ಯಾವುದಕ್ಕೂ ಸಾಲಲ್ಲ
ನಳ್ಳಿಯಲ್ಲಿ 2 ದಿನಕ್ಕೊಮ್ಮೆ 2-3 ಕೊಡಪಾನ ಕೊಡುತ್ತಾರೆ. ಅದು ಎಲ್ಲಿ ಸಾಕಾಗುತ್ತದೆ. ಈ ಹಕ್ಲಾಡಿ ಗುಡ್ಡೆಯಲ್ಲಿ ಸುಮಾರು 50 -60 ಮನೆಗಳಿವೆ. ಇಲ್ಲಿ ಎಲ್ಲ ಕಡೆ ನೀರಿನ ಸಮಸ್ಯೆಯಾಗುತ್ತಿದೆ ಎನ್ನುವುದು ಇಲ್ಲಿನ ನಿವಾಸಿ ಗಣಪತಿ ಅವರ ಅನಿಸಿಕೆ.
Related Articles
Advertisement
ಕಿಂಡಿ ಅಣೆಕಟ್ಟು ಪ್ರಯೋಜನ ಶೂನ್ಯಇಡೀ ಗ್ರಾಮಕ್ಕೆ ಗ್ರಾ.ಪಂ. ಕಚೇರಿ ಸಮೀಪದಲ್ಲೊಂದು ಓವರ್ ಹೆಡ್ ಟ್ಯಾಂಕ್ ಇದೆ. ಅಲ್ಲಿಂದ ಇಷ್ಟು ದೂರಕ್ಕೆ ನೀರು ಸರಿಯಾಗಿ ಪೂರೈಕೆಯಾಗುವುದು ಕಷ್ಟ. ಅದಕ್ಕಾಗಿ ಈ ಭಾಗದಲ್ಲೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದರೆ ಅನುಕೂಲವಾಗುತ್ತದೆ. ಕಿಂಡಿ ಅಣೆಕಟ್ಟು ಇದ್ದರೂ ಈ ಕಡೆಯ ಬಾವಿ ನೀರೆಲ್ಲ ಉಪ್ಪು ನೀರಾಗಿದೆ. ಮತ್ತೆ ಕೋಟ್ಯಂತರ ರೂ. ಖರ್ಚು ಮಾಡಿ ಈ ಕಿಂಡಿ ಅಣೆಕಟ್ಟು ನಿರ್ಮಿಸಿ ಏನು ಪ್ರಯೋಜನ.
– ಸಂತೋಷ್, ತೋಪ್ಲು ಕುಡಿಯುವ ನೀರಿಗೆ ಆದ್ಯತೆ
ಪಂಚಾಯತ್ ವತಿಯಿಂದ ಎಲ್ಲ ಕಡೆಗೂ ನೀರು ಪೂರೈಸಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಹಕ್ಲಾಡಿಗುಡ್ಡೆ, ತೋಪ್ಲು, ಬಟ್ಟೆಕುದ್ರು, ನೂಜಾಡಿ, ಬ್ರಹೆ¾àರಿ ಕಡೆಗೆ ಹೆಚ್ಚುವರಿ ನೀರು ಸರಬರಾಜು ಮಾಡಲಾಗುತ್ತಿದೆ. ನಾಡದಲ್ಲಿ ಜಲಧಾರೆ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡರೆ ನಮ್ಮ ಗ್ರಾಮಕ್ಕೂ ಅನುಕೂಲವಾಗಲಿದೆ. ಅದು ಆದರೆ ಟ್ಯಾಂಕರ್ ನೀರಿನ ಪೂರೈಕೆಯ ಅಗತ್ಯವೇ ಬರುವುದಿಲ್ಲ.
– ಚಂದ್ರ ಬಿಲ್ಲವ, ಹಕ್ಲಾಡಿ ಗ್ರಾ.ಪಂ. ಪಿಡಿಒ ಜನರ ಬೇಡಿಕೆಗಳು
– ಟ್ಯಾಂಕರ್ ನೀರು ಹೆಚ್ಚು ಕೊಡಲಿ
– ನಳ್ಳಿ ಸಂಪರ್ಕವಿರುವ ಕೊನೆಯವರೆಗೂ ನೀರು ಸರಿಯಾಗಿ ಪೂರೈಕೆಯಾಗಲಿ.
– ಇನ್ನಷ್ಟು ಹೆಚ್ಚು ಸಮಯ ನಳ್ಳಿ ನೀರು ಬಿಡಲಿ.