ಹೊನ್ನಾಳಿ: ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೂಡಲೇ ತಾಲೂಕು ಆಡಳಿತ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಮೇಶ್ ತಹಶೀಲ್ದಾರ್ ನಾಗರಾಜ್ ಅವರಿಗೆ ಸೂಚಿಸಿದರು.
ಗುರುವಾರ ವಿಡಿಯೋ ಕಾನೆರೆನ್ಸ್ ಮುಖಾಂತರ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರ್‌ಗಳ ಜೊತೆ ಚರ್ಚಿಸುವಾಗ ಹೊನ್ನಾಳಿ ತಹಶೀಲ್ದಾರ್ ಜೊತೆ ಕೂಡ ಚರ್ಚೆ ನಡೆಸಿ ಕುಡಿಯುವ ನೀರು,ಬರ ಪರಿಹಾರದ ಹಣ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಕೆಲವು ಸೂಚನೆ ಅಗತ್ಯವಾಗಿ ಪಾಲಿ ಸಬೇಕು ಎಂದು ಆದೇಶ ನೀಡಿದರು.
ತಾಲೂಕಿನಲ್ಲಿ 28,483 ಖಾತೆದಾರರನ್ನು ಬರ ಪರಿಹಾರ ಪಟ್ಟಿಗೆ ಸೇರಿಸಿದೆ. 2 ಕಂತುಗಳಲ್ಲಿ 20,223 ಖಾತೆದಾರರಿಗೆಹಣ ಬಿಡುಗಡೆ ಯಾಗಿದ್ದು, 3ನೇ ಕಂತಿನಲ್ಲಿ 8,267 ಖಾತೆದಾರರಿಗೆ ಹಣ ಬಿಡುಗಡೆ ಮಾಡಲು ಖಾತೆದಾರರಿಂದ ಅಗತ್ಯ ದಾಖಲೆಗಳನ್ನು ಪಡೆಯುವ ಪ್ರಕ್ರಿಯೇ ಪ್ರಗತಿಯಲ್ಲಿದೆ ಎಂದು ತಹಶೀಲ್ದಾರ್ ನಾಗರಾಜ್ ಜಿಲ್ಲಾಧಿ ಧಿಕಾರಿಗಳಿಗೆ ವಿವರಿಸಿದರು.
5053 ಬಗರ್‌ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಾಮಾಜಿಕ ಭದ್ರತೆ ಯೋಜನಡಿ ಪಡೆಯುವ ವಿಧವ ವೇತನ, ಸಂಧ್ಯ ಸುರಕ್ಷ, ಮನಸ್ವಿನಿ ಇನ್ನಿತರ ಯೋಜನೆಗಳನ್ನು ಪಡೆಯುವ ರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಕ್ಕು ದಾಖಲೆ ಶಿರೆಸ್ತೇದಾರ್ ಹಾಗೂ ರಂಗಪ್ಪ, ಸಾಮಾಜಿಕ ಭದ್ರತೆ ಶಿರಸ್ತೇದಾರ್ ಕೆಂಚಮ್ಮ ವಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.