Advertisement
ಗ್ರಾಮಾಂತರದಲ್ಲಿ ಎರಡು ದಿನ ಕೊಂಚ ಮಳೆ ಸುರಿದು ಇಳೆ ತಂಪಾಗಿದ್ದರೂ ನೀರಿನ ಕೊರತೆ ನೀಗಲಾರದು. ಹಾಗಾಗಿ ಮಳೆ ಕೈ ಕೊಟ್ಟರೆ ಪರಿಸ್ಥಿತಿ ಬರೆಗಾಲದ ಸ್ವರೂಪ ಪಡೆದುಕೊಳ್ಳುವ ಆತಂಕ ಉಂಟಾಗಿದೆ.
ನಳ್ಳಿ ನೀರು ನಂಬಿದ ಕುಟುಂಬಗಳು ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ಉಂಟಾಗಿದೆ. ನೀರು ಲಭ್ಯವಿದ್ದರೂ, ಪೂರೈಕೆಗೆ ವಿದ್ಯುತ್ ಸಮಸ್ಯೆ ಅಡ್ಡಿಯಾಗಿದೆ. ತ್ರಿಫೇಸ್ ಇಲ್ಲದೆ ಕೊಳವೆಬಾವಿ ಪಂಪ್ ಚಾಲೂ ಆಗುತ್ತಿಲ್ಲ. ಕರೆಂಟ್ ಬಳಸದೆ ಪರ್ಯಾಯ ವ್ಯವಸ್ಥೆಯಲ್ಲಿ ನೀರೆತ್ತಲು ದಾರಿ ಇಲ್ಲ. ಹೀಗಾಗಿ ಗ್ರಾ.ಪಂ.ಗಳಿಗೆ ನೀರೋದಗಿಸಲು ಸಮಸ್ಯೆ ತಂದೊಡ್ಡಿದೆ.
Related Articles
ನಗರದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅಂಬೆಟಡ್ಕ, ಬೋರುಗುಡ್ಡೆ, ಕುರುಂಜಿಬಾಗ್ ಮೊದಲಾದ ಎತ್ತರದ ಪ್ರದೇಶಕ್ಕೆ ನೀರು ಪೂರೈಕೆ ಆಗದ ಕಾರಣ ಟ್ಯಾಂಕರ್‌ನಲ್ಲಿ ವಿತರಿಸಲಾಗುತ್ತಿದೆ. 6000 ಲೀ. ಸಾಮರ್ಥ್ಯದ ಟ್ಯಾಂಕರ್ ಇದ್ದು, ಇದರಲ್ಲಿ ನೀರು ಪೂರೈಸಲಾಗುತ್ತಿದೆ.
Advertisement
ಒಡೆದ ಮರಳು ಕಟ್ಟಪಯಸ್ವಿನಿ ನದಿ ಪಾತ್ರದಲ್ಲಿ ಮಳೆ ಸುರಿದಿದ್ದು, ನಾಗಪಟ್ಟಣ ಬಳಿ ನಿರ್ಮಿಸಿದ ಮರಳು ಕಟ್ಟದಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಗುರುವಾರ ರಾತ್ರಿ ಕಟ್ಟದ ಹೆಚ್ಚುವರಿ ನೀರು ನದಿಗೆ ಹರಿದಿದೆ. ಒತ್ತಡ ಹೆಚ್ಚಿ ಕಟ್ಟದ ಒಂದು ಪಾರ್ಶ್ವ ಒಡೆದು ಹೋಗಿ, ಮರಳಿನ ಚೀಲಗಳು ನೀರು ಪಾಲಾಗಿವೆ. ಅದನ್ನು ಮರುಜೋಡಿಸುವ ಕಾರ್ಯಕ್ಕೆ ನ.ಪಂ.ಮುಂದಾಗಿದೆ.