Advertisement
ಜಿಲ್ಲೆಯ 155 ಗ್ರಾ.ಪಂ.ಗಳಲ್ಲಿ 46 ಗ್ರಾ.ಪಂಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅನುದಾನದ ಕೊರತೆಯಿಂದ ಕೆಲವು ಗ್ರಾ.ಪಂ.ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಯೂ ಕಷ್ಟವಾಗುತ್ತಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ 31 ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ಅದರಲ್ಲಿ 28 ಫಲ ನೀಡಿದ್ದು, 3ರಲ್ಲಿ ನೀರು ಸಿಕ್ಕಿಲ್ಲ. ಈಗ ಹೊಸದಾಗಿ 148 ಬೋರ್‌ವೆಲ್ ಕೊರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ಸಿಕ್ಕಿಲ್ಲ.
Related Articles
Advertisement
ನಿರ್ವಹಣೆ ಸವಾಲುರಾಜ್ಯ ಸರಕಾರದಿಂದ ಕುಡಿಯುವ ನೀರಿನ ನಿರ್ವಹಣೆಗೆ ಗ್ರಾ.ಪಂ.ಗಳಿಗೆ ಅನುದಾನ ಬಾರದೇ ಇರುವುದರಿಂದ ಸ್ವಂತ ಆದಾಯ ಕಡಿಮೆ ಇರುವ ಪಂಚಾಯತ್‌ಗಳು ಟ್ಯಾಂಕರ್ ನೀರು ಪೂರೈಕೆಗೆ ಕಷ್ಟಪಡುತ್ತಿವೆ. ಆದಾಯ ಚೆನ್ನಾಗಿರುವ ಗ್ರಾ.ಪಂ.ಗಳು ಹೇಗೂ ನಿರ್ವಹಣೆ ಮಾಡುತ್ತಿವೆ. ನೀರಿನ ಮೂಲವೇ ಬರಿದಾಗುತ್ತಿರುವುದರಿಂದ ನೀರು ಎಲ್ಲಿಂದ ಹೊಂದಿಸಿ ಮನೆ ಮನೆಗೆ ಒದಗಿಸುವುದು ಎಂಬ ಚಿಂತೆ ಬಹುತೇಕ ಗ್ರಾ.ಪಂ.ಗಳಲ್ಲಿದೆ.