Advertisement
ಯಾವುದೇ ಹೊಸ ಕೆಲಸವನ್ನು ಚುನಾವಣ ನೀತಿಸಂಹಿತೆ ಜಾರಿಯಲ್ಲಿರುವಾಗ ನಡೆಸುವುದಕ್ಕೆ ಅನುಮತಿ ಇರುವುದಿಲ್ಲ. ಆದರೆ ಚುನಾವಣೆ ಸಂದರ್ಭ ದಲ್ಲೇ ಬೇಸಿಗೆಯ ಝಳ ಹೆಚ್ಚಿದ್ದು ನೀರಿನ ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ. ತುರ್ತು ಕೆಲಸ ಕೈಗೊಳ್ಳದೆ ಹೋದರೆ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಚುನಾವಣ ಆಯೋಗದ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ರಾಜ್ಯಾದ್ಯಂತ ನೀರಿನ ಸಮಸ್ಯೆ ಇರುವ ಜಿಲ್ಲೆಗಳಿಗೆ 1 ಕೋಟಿ ರೂ. ವೆಚ್ಚಕ್ಕೆ ಕ್ರಿಯಾಯೋಜನೆ ಕಳುಹಿಸುವಂತೆ ಸರಕಾರ ಸೂಚಿಸಿತ್ತು. ಈಗಾಗಲೇ ದ.ಕ. ಜಿಲ್ಲೆಯಿಂದ ಕ್ರಿಯಾಯೋಜನೆ ಹೋಗಿದೆ.
Related Articles
Advertisement
ಈಗಾಗಲೇ ಬಾಳೆಪುಣಿ, ನರಿಂಗಾನ, ತಲಪಾಡಿಗಳಲ್ಲಿ ಹಲವು ಪ್ರದೇಶಗಳಲ್ಲಿ ನೀರು ಪೂರ್ತಿ ಬತ್ತಿ ಹೋದ ಹಿನ್ನೆಲೆಯಲ್ಲಿ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಲಾಗುತ್ತಿದೆ.
ನದಿ ಬತ್ತಿ ಬಹುಗ್ರಾಮ ಯೋಜನೆಗಳಿಗೂ ಸಮಸ್ಯೆನೇತ್ರಾವತಿ, ಫಲ್ಗುಣಿಯಲ್ಲಿ ನೀರು ಬತ್ತಿರುವುದರಿಂದಾಗಿ ಸರಪಾಡಿ, ಸಂಗಬೆಟ್ಟು, ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ(ಎಂವಿಎಸ್)ಗಳಿಗೂ ನೀರಿಲ್ಲವಾಗಿದೆ. ನದಿಯ ಕೆಲವು ಆಳವಾದ ಹೊಂಡಗಳಲ್ಲಿ ನೀರನ್ನು ಗುರುತಿಸಲಾಗಿದ್ದು, ಪಂಪ್ ಮಾಡಿ ಎಂವಿಎಸ್‌ನ ಜಾಕ್‌ವೆಲ್‌ಗಳಿಗೆ ತರಲಾಗುತ್ತಿದೆ. ಅಗತ್ಯವಿದ್ದರೆ ಹತ್ತಿರದ ಇತರ ಅಣೆಕಟ್ಟುಗಳಿಂದ ನೀರು ಪಡೆಯಲಾಗುತ್ತದೆ. ಇದನ್ನು ರೇಷನಿಂಗ್ ಮಾಡಿ ಕೊಂಡು ನೀರು ಗ್ರಾಮಗಳಿಗೆ ತಲಪಿಸಲಾಗುತ್ತಿದೆ.
ಇದಕ್ಕಾಗಿ ಹೆಚ್ಚುವರಿ ಪೈಪ್‌ಲೈನ್ ಹಾಕಲಾಗಿದೆ, ಮೋಟಾರ್‌ಪಂಪ್ ಬಳಸಿಕೊಂಡು, ಸರಪಾಡಿಯಲ್ಲಿನ ಹೊಂಡಗಳಿಂದ 2.5 ಎಂಎಲ್‌ಡಿ ನೀರು, ಸಂಗಬೆಟ್ಟಿನ ನದಿ ಹೊಂಡಗಳಿಂದ 1.5 ಎಂಎಲ್‌ಡಿ ನೀರು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಬಾಬು. 1 ಕೋಟಿ ರೂ. ವೆಚ್ಚದ ವಿವಿಧ ಕೆಲಸಗಳಿಗೆ ಕ್ರಿಯಾಯೋಜನೆ ಮಾಡಿ ಸರಕಾರಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಇಷ್ಟೇ ಅಲ್ಲದೆ 15ನೇ ಹಣಕಾಸು ಆಯೋಗದ ಹಣವನ್ನು ಬಳಸಿಕೊಂಡು ಗ್ರಾ.ಪಂ.ಗಳು ಕುಡಿಯುವ ನೀರಿನ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಅದರಲ್ಲಿ ಬೋರ್‌ವೆಲ್ ಹೊಸದಾಗಿ ಕೊರೆಯಲೂ ಸಾಧ್ಯವಿದೆ.
– ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ – ವೇಣುವಿನೋದ್ ಕೆ.ಎಸ್.