Advertisement

ಕುಡಿಯುವ ನೀರಿನ ಯೋಜನೆ ಎಂಜಿನಿಯರ್ ಗಳೊಂದಿಗೆ ಶಾಸಕರ ಸಭೆ

11:29 PM Jun 08, 2019 | sudhir |

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಹಾಗೂ ಕ್ಷೇತ್ರದ ಜನತೆಗೆ ನೀರು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೂತನ ಯೋಜನೆ ರೂಪಿಸುವ ಸಲುವಾಗಿ ಶಾಸಕ ವಿ. ಸುನಿಲ್ ಕುಮಾರ್‌ ಅವರು ಇಲಾಖೆ ಎಂಜಿನಿಯರ್‌ಗಳೊಂದಿಗೆ ಜೂ. 7ರಂದು ತಾ.ಪಂ. ಸಭಾಂಗಣದಲ್ಲಿ ಸಮಾಲೋಚನ ಸಭೆ ನಡೆಸಿದರು.

Advertisement

ಹೆಬ್ರಿ ಹಾಗೂ ನಿಟ್ಟೆಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿಕೊಡುವಂತೆ ಸೂಚಿಸಿದ ಶಾಸಕರು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೀತಾನದಿ ಕಿಂಡಿ ಅಣೆಕಟ್ಟಿನಿಂದ ಹಾಗೂ ವಾರಾಹಿ ನೀರಿನ ಮೂಲದಿಂದ ನೀರು ಪೂರೈಸುವ ಸಾಧ್ಯತೆ ಕುರಿತು ಪರಿಶೀಲಿಸಿ ವರದಿ ನೀಡುವಂತೆಯೂ ತಿಳಿಸಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿಲ್ಲಾ ಪಂಚಾಯತ್‌ ಸದಸ್ಯರಾದ ಉದಯ ಎಸ್‌. ಕೋಟ್ಯಾನ್‌, ರೇಷ್ಮಾ ಉದಯ ಶೆಟ್ಟಿ, ದಿವ್ಯಶ್ರೀ ಅಮೀನ್‌, ಸುಮಿತ್‌ ಶೆಟ್ಟಿ, ಜ್ಯೋತಿ ಹರೀಶ್‌ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮೈಸೂರು ವಿಭಾಗದ ಸುಪರಿಂಟೆಂಡೆಂಟ್ ಎಂಜಿನಿಯರ್‌ ವೀರಭದ್ರಯ್ಯ, ಉಡುಪಿ ಕಾರ್ಯನಿರ್ವಾಹಕ ಎಂಜಿನಿಯರ್‌, ಕಾರ್ಕಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next