Advertisement

ಹೊಸಾಡು: ಕುಡಿಯುವ ನೀರಿನದ್ದೇ ಪ್ರಮುಖ ಸಮಸ್ಯೆ

01:00 AM Jan 31, 2019 | Team Udayavani |

ತ್ರಾಸಿ: ಹೊಸಾಡು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಭಗತ್‌ನಗರ, ಖಾರ್ವಿಕೆರೆ ಗ್ರಾಮಸ್ಥರಿಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.

Advertisement

ಇಲ್ಲಿಯ 90 ಮನೆಗಳಿಗೆ ಒಂದೇ ಸರಕಾರಿ ಬಾವಿ ಇದೆ. ಒಂದು ಬೋರ್‌ವೆಲ್‌ ಕೊರೆಸಿದ್ದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ ಬಾವಿಗಳಿದ್ದರೂ, ಹೆಚ್ಚಿನದ್ದು ಬತ್ತಿ ಹೋಗಿದೆ. ಖಾರ್ವಿಕೆರೆಯಲ್ಲಿರುವ ಗ್ರಾ.ಪಂ. ಬಾವಿಯಿಂದ ಟ್ಯಾಂಕ್‌ಗೆ ನೀರು ಹರಿಸಲಾಗುತ್ತದೆ. ಇದರಿಂದ ಕೇವಲ 1ಗಂಟೆ ಮಾತ್ರ ನೀರು ಸಸಿಗುತ್ತದೆ. ಕಳೆದ ಬಾರಿ ಮೇ ವರೆಗೆ ಬಾವಿಯಲ್ಲಿ ನೀರಿತ್ತು. ಈ ವರ್ಷ ನೀರು ಆಳಕ್ಕೆ ಹೋಗಿದ್ದು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಸಂಭವವಿದೆ.

2 ದಿನಕ್ಕೊಮ್ಮೆ ನೀರು

ಭಗತ್‌ನಗರದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ 25 ಸಾವಿರ ಲೀಟರ್‌ ನೀರು ಹಿಡಿಯ ಬಹುದಾಗಿದ್ದರೂ 20 ಸಾವಿರ ಲೀಟರ್‌ ನೀರು ಮಾತ್ರ ತುಂಬುತ್ತಿದೆ. 100 ಮನೆಗಳಿಗೆ ಹೆಚ್ಚೆಂದರೆ 5-6 ಕೊಡ ನೀರು ಮಾತ್ರ ಸಿಗುತ್ತಿದೆ. ತಗ್ಗು ಪ್ರದೇಶದಲ್ಲಿದ್ದವರಿಗೆ ತುಸು ಹೆಚ್ಚು ಸಿಗುತ್ತದೆ. ಒಂದು ದಿನ ಭಗತ್‌ನಗರ ಹಾಗೂ ಮತ್ತೂಂದು ದಿನ ಖಾರ್ವಿಕೆರೆಗೆ 2 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ.

ನೀರಿನ ಸಮಸ್ಯೆ ಗಂಭೀರ

Advertisement

ಇಲ್ಲಿನ ಇಷ್ಟೂ ಮನೆಗಳಿಗೆ ಒಂದೇ ಬಾವಿಯಿಂದ ನೀರು ಪೂರೈಸಬೇಕಾಗಿ ರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಅದೂ ಹೆಚ್ಚು ನೀರು ಸಿಗುವುದಿಲ್ಲ. ಶಾಶ್ವತ ಪರಿಹಾರ ಎನ್ನುವಂತೆ ಬೋರ್‌ವೆಲ್‌ ಅಥವಾ ತೆರೆದ ಬಾವಿ ತೋಡಿಸಿದರೆ ಸಮಸ್ಯೆ ನಿವಾರಣೆಯಾಗಬಹುದು.

– ಸುರೇಶ್‌, ಸ್ಥಳೀಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next