Advertisement
·ತಾಮ್ರದ ಪಾತ್ರೆಯಲ್ಲಿನ ನೀರಿನ ನಿಯಮಿತ ಸೇವನೆ ಜೀರ್ಣಶಕ್ತಿ ಹೆಚ್ಚಿಸುವ ಸಾಮರ್ಥ್ಯ ತಾಮ್ರದ ನೀರಿಗಿದೆ.
Related Articles
Advertisement
·ತಾಮ್ರದಲ್ಲಿರುವ ಆಲಿಗೋಡೈನಮಿಕ್ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.
·ಸಂಧಿವಾತದ ಜತೆಗೆ ಊರಿಯೂತವನ್ನು ಕಡಿಮೆ ಮಾಡುವ ಶಕ್ತಿ ತಾಮ್ರದ ನೀರಿಗಿದೆ.
·ತಾಮ್ರದ ನೀರಿಗೆ ಚರ್ಮದ ಕಾಂತಿಯನ್ನು ಹೆಚ್ಚಿಸುವ ಜತೆಗೆ ಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸುತ್ತದೆ.
·ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ರಕ್ತಕಣಗಳನ್ನು ಹೆಚ್ಚಿಸುವ ಸಾಮರ್ಥ್ಯವೂ ತಾಮ್ರಕ್ಕಿದೆ.
ತಾಮ್ರ ದೇಹಕ್ಕೆ ಅತ್ಯಂತ ಅಗತ್ಯ ಖನಿಜಗಳಲ್ಲಿ ಒಂದಾಗಿದೆ. ತಾಮ್ರದ ಪಾತ್ರೆಗಳು ನೀರನ್ನು ಶುದ್ಧೀಕರಿಸುತ್ತದೆ. ಹೊಸ ಜೀವ ಕೋಶಗಳನ್ನು ಉತ್ವತ್ತಿ ಮಾಡುವ ಸಾಮರ್ಥ್ಯವೂ ತಾಮ್ರಕ್ಕೆ ಇದೆ.
ಹೃದಯಾಘಾತಗಳು ಇಂದು ಸಾಮಾನ್ಯ ಎಂಬಂತಾಗಿದೆ. ತಾಮ್ರವೂ ಹೃದಯಾಘಾತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಸಂಶೋಧನೆಯ ಪ್ರಕಾರ ತಾಮ್ರದ ನೀರಿನ ಸೇವನೆಯಿಂದ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ , ಟ್ರೈಗ್ಲಿಸರೈಡ್ ಕೂಡ ಕಡಿಮೆಯಾಗುತ್ತದೆ.
•••••ಧನ್ಯಾ ಬೋಳಿಯಾರ್