Advertisement

ಹೆಚ್ಚು ಟೀ, ಕಾಫಿ ಕುಡಿದರೆ ರಕ್ತಹೀನತೆ ಬಾಧೆ ಗ್ಯಾರಂಟಿ!

09:39 AM May 14, 2024 | Team Udayavani |

ನವದೆಹಲಿ: ಟೀ, ಕಾಫಿ ಲವರ್ಸ್‌ಗೆ ಇದು ಬೇಸರ ತರಿಸುವ ಸುದ್ದಿ. ನೀವು ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ, ಈ ಕೂಡಲೇ ಆ ಅಭ್ಯಾಸವನ್ನು ಬಿಟ್ಟು ಬಿಡಿ ಎನ್ನುತ್ತಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್‌) ಬಿಡುಗಡೆ ಮಾಡಿರುವ “ಭಾರತೀಯರಿಗೆ ಆಹಾರ ಕ್ರಮ ಮಾರ್ಗದರ್ಶಿ’.

Advertisement

ಊಟಕ್ಕಿಂತ ಮೊದಲ ಅಥವಾ 1 ಗಂಟೆ ನಂತರ ಟೀ ಅಥವಾ ಕಾಫಿ ಸೇವಿಸಬೇಕು. ಯಾಕೆಂದರೆ, ಈ ಪಾನೀಯಗಳು ಆಹಾರದಲ್ಲಿನ ಕಬ್ಬಿಣಾಂಶ‌ವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರಕ್ತ ಉತ್ಪಾದನೆಗೆ ಕಬ್ಬಿಣಾಂಶ ಅತ್ಯಗತ್ಯ. ದೇಹದ ಶೇ.70ರಷ್ಟು ಕಬ್ಬಿಣಾಂಶವು ಹೀಮೊಗ್ಲೋಬಿನ್‌ ಕೆಂಪು ರಕ್ತಕಣಗಳಲ್ಲಿ ಇರುತ್ತದೆ. ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆಗೆ ಕಾರಣವಾಗುತ್ತದೆ ಎಂದು ಐಸಿಎಂಆರ್‌ ತಿಳಿಸಿದೆ.

ಅನಾರೋಗ್ಯಪೀಡಿತರಿಗೆ ಎಳ  ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಕುಡಿಸುತ್ತಾರೆ. ಆದರೆ, ಹೈಪರ್‌ ಕಲೆಮಿಯಾ (ಕಿಡ್ನಿ ಮತ್ತು ಹೃದಯ ಸಂಬಂಧಿ ರೋಗ)ದಿಂದ ಬಳಲುತ್ತಿರುವವರು ಎಳನೀರು ಕುಡಿಯಬಾರದು ಎಂದು ಐಸಿಎಂಆರ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next