ಚಡಚಣ: ಬತ್ತಿದ ಭೀಮಾನದಿ, ನೀರಿಗಾಗಿ ನದಿ ತೀರದ ಗ್ರಾಮಗಳ ಜನರ ಪರದಾಟ. ಇದಕ್ಕೆ ಸಾಕ್ಷಿ ಎಂಬಂತೆ ರೇವತಗಾಂವ ಗ್ರಾಮವು ಕೂಡ ಹೊರತಾಗಿಲ್ಲ, ಈ ವರ್ಷ ಮಳೆಯು ಕೈ ಕೊಟ್ಟ ಹಿನ್ನೆಲೆಯಲ್ಲಿ, ಭೀಕರ ಬರಗಾಲ ಸಂಭವಿಸಿ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ದಿನವಿಡಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ರೇವತಗಾಂವ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮೂರು-ನಾಲ್ಕು ಕಿ.ಮೀ ದೂರದಿಂದ ಸೈಕಲ್ ಹಾಗೂ ಬೈಕ್ ಗಳ ಮೇಲೆ ತಂದು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ಇನ್ನೊಂದಡೆ ಕೆಲವು ಮಹಿಳೆಯರು ಕಿ.ಮೀ. ನಡೆದುಕೊಂಡು ಹೋಗಿ ನೀರನ್ನು ಹೊತ್ತುಕೊಂಡು ಬರುತ್ತಿದ್ದಾರೆ, ಇದರಿಂದ ಮುಕ್ತಿ ಸಿಗುವುದು ಯಾವಾಗ? ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ
ಮನೆ ಮಾಡಿಕೊಂಡಿದೆ.
ಬಹು ಹಳ್ಳಿ ಕುಡಿಯುವ ನೀರಿನ ಘಟಕವು ಸ್ಥಗಿತ-ಭೀಮಾ ನದಿಯು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ನಿವರಗಿ ಕ್ರಾಸ್
ಹತ್ತಿರವಿರುವ ಬಹು ಹಳ್ಳಿ ಕುಡಿಯುವ ನೀರಿನ ಘಟಕ್ಕೂ ಈ ಭೀಮಾ ನದಿಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಈಗ
ಈ ನೀರಿನ ಘಟಕವು ಬಂದಾಗಿದ್ದು, ಇದರಿಂದ ಗ್ರಾಮಕ್ಕೆ ಒಂದು ತಿಂಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ.
ನೀರಿನ ಘಟಕಗಳು ಸ್ಥಗಿತ: ಗ್ರಾಮದಲ್ಲಿ ನೀರಿನ ತೊಂದರೆಯನ್ನು ತಪ್ಪಿಸಲು ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಂಚಾ¿ತ್ ವತಿಯಿಂದ ಆರಂಭಿಸಲಾಗಿತ್ತು, ಆದರೆ ಒಂದು ವರ್ಷದಿಂದ ಗ್ರಾಪಂ ಮುಂಭಾಗ ಹಾಗೂ ಅಂಬೇಡ್ಕರ್ ಕಾಲೋನಿ ಹತ್ತಿರವಿರುವ ಶುದ್ಧ ಕುಡಿಯುವ ನೀರಿನ ಘಟಕಗಳೆರಡು ಬಂದ ಬಿದ್ದು ವರ್ಷ ಕಳೆಯುತ್ತಿದ್ದರು ಅವುಗಳನ್ನು ಪುನಃ ರಂಭಿಸುವ
ಕಾರ್ಯ ಮಾತ್ರ ಅಧಿಕಾರಿಗಳು ಮಾಡುತ್ತಿಲ್ಲ.
ಕಿ.ಮೀ.ಗಟ್ಟಲೆ ದೂರ ಹೋಗಿ ಕುಡಿಯುವ ನೀರನ್ನು ತರಲು ಹೋದರೆ ನಮಗೂ ಕುಡಿಯಲು ನೀರು ಸಾಕಾಗತಾಯಿಲ್ಲ, ಹಿಂಗಾದ್ರ ನಾವು ಕುಡಿಯಲು ನೀರು ಎಲ್ಲಿಂದ ತರಬೇಕ್ರಿ, ಟ್ಯಾಂಕರ್ ಮೂಲಕಾದ್ರು ನಮಗ ನೀರು ಕೊಡ್ರೀ ಇಲ್ಲಂದ್ರ ನಾವು ಹೋಟ್ ಹಾಕೋದೇ ಇಲ್ಲ ಎಂದು ಗ್ರಾಮಸ್ಥೆ ನೀಲವ್ವ ಜಕ್ಕಪ್ಪ ಬೀರುಣಗಿ ಹೇಳಿದರು.