Advertisement
ಗ್ರೀನ್ ಟೀ ಆಕ್ಸಿಡೀಕರಿಸದ ಎಲೆಗಳನ್ನು ಬಳಸಿ ತಯಾರಿಸಿದ ಕಡಿಮೆ ಸಂಸ್ಕರಿಸಿದ ಚಹಾಗಳಲ್ಲಿ ಇದು ಒಂದು. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅನೇಕ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುತ್ತಾರೆ. ಇನ್ನೂ ಕೆಲವರು ರಾತ್ರಿ ಮಲಗುವ ವೇಳೆ ಹವ್ಯಾಸವಾಗಿ ಕುಡಿಯುತ್ತಾರೆ. ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀಳಬಹುದು.
Related Articles
Advertisement
ದಿನವಿಡೀ 2ರಿಂದ 3 ಕಪ್ ಹಸಿರು ಚಹಾವನ್ನು ಸೇವಿಸಿದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಆದರೆ, 3 ಕಪ್ಗಿಂತ ಹೆಚ್ಚು ಗ್ರೀನ್ ಟೀ ಕುಡಿದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಇದರಿಂದ ರಕ್ತಹೀನತೆ, ವಾಕರಿಕೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.
ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀಯಲ್ಲಿ ಪಾಲಿಫಿನಾಲ್‌ಗಳು ಮತ್ತು ಕೆಫೀನ್ ಇರುತ್ತದೆ. ದಿನದಲ್ಲಿ 3 ಕಪ್ ಗಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯಬೇಡಿ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅತಿಯಾದ ಕೆಫೀನ್ ವಾಂತಿ, ಅತಿಸಾರ, ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟಕ್ಕೆ ಮುಂಚೆ ಗ್ರೀನ್ ಟೀಯನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಅಥವಾ ವಾಕರಿಕೆ ಉಂಟಾಗಬಹುದು. ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ನಿದ್ದೆ ಕೂಡ ಬರುವುದಿಲ್ಲ. ಆದ್ದರಿಂದ, ದಿನಕ್ಕೆ ಒಂದು ಅಥವಾ ಎರಡು ಕಪ್ ಗ್ರೀನ್ ಟೀ ಮಾತ್ರ ಕುಡಿಯುವುದು ಒಳ್ಳೆಯದು.
ಗ್ರೀನ್ ಟೀ ಕುಡಿಯಲು ಉತ್ತಮ ಸಮಯ ಯಾವುದು?
ನೀವು ದಿನನಿತ್ಯ ವ್ಯಾಯಾಮ ಮಾಡುವುದಾದರೆ ಆ ವ್ಯಾಯಾಮ ಮಾಡುವುದಕ್ಕೂ ಮುಂಚೆ ಗ್ರೀನ್ ಟೀಯನ್ನು ಸೇವಿಸಿ. ಗ್ರೀನ್ ಟೀಯನ್ನು ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ. ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಎದ್ದ ಕೂಡಲೇ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿ.
-ಶ್ವೇತಾ ಮುಂಡ್ರುಪ್ಪಾಡಿ