Advertisement

Drink and Drive: ಗೋವಾ ಟ್ರಾಫಿಕ್ ಪೊಲೀಸರಿಂದ ಜನಜಾಗೃತಿ ಅಭಿಯಾನ

12:50 PM Aug 13, 2023 | Team Udayavani |

ಪಣಜಿ: ಕೆಲ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾ ಟ್ರಾಫಿಕ್ ಪೊಲೀಸರು ಹೊಸ ಟ್ರಿಕ್ ಮೂಲಕ ಇಂತಹವರನ್ನು ಕುಡಿದು ವಾಹನ ಏರುವ ಮುನ್ನವೇ ಬಂಧಿಸಲು ಹೊಸ ಪ್ಲ್ಯಾನ್ ರೂಪಿಸಿದ್ದಾರೆ.

Advertisement

ಕಿಕ್ಕಿರಿದು ತುಂಬಿರುವ ಬಾರ್‍ ಗಳಿಂದ ಹೊರಬರುವ ಜನರ ಮೇಲೆ ಕಣ್ಣಿಡಲು ಅಂತಹ ಬಾರ್‍ ಗಳ ಹೊರಗೆ ಪೊಲೀಸರನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲು ಪೋಲಿಸ್ ಇಲಾಖೆ ಮುಂದಾಗಿದೆ.

ಗೋವಾದ ಬಾಣಸ್ತರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದ ನಂತರ ಸಂಚಾರ ಪೊಲೀಸರು, ʼಕುಡಿದು ವಾಹನ ಚಲಾಯಿಸುವ’ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಆದರೂ ಕೆಲವರು ಈ ನಿಯಮ ಪಾಲಿಸುತ್ತಿಲ್ಲ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಆಗಾಗ್ಗೆ ಅಭಿಯಾನಗಳನ್ನು ಪ್ರಾರಂಭಿಸಲಾಗುತ್ತದೆ. ಪೊಲೀಸರು ಜನಜಾಗೃತಿ ಅಭಿಯಾನ ನಡೆಸಿದರೂ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆ.

ರಾತ್ರಿ ಪಾರ್ಟಿಗಳಿಗೆ ತೆರಳಿದಾಗ ಯಾವುದೇ ವಾಹನ ಚಾಲಕರು ಮದ್ಯ ಸೇವಿಸಬಾರದು ಎಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ ಎಂಬ ಅಂಶವನ್ನು ಪೋಲಿಸರು ಗಂಭೀರವಾಗಿ ಪರಿಗಣಿಸಿ ಇದೀಗ ಹೊಸ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ.

Advertisement

ಈ ಹಿಂದೆ ಸಂಚಾರ ಪೊಲೀಸರು ಮದ್ಯದಂಗಡಿಗಳಲ್ಲಿ ಚಾಲಕರು ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡುವ ಫಲಕಗಳನ್ನು ಹಾಕುವಂತೆ ಸೂಚನೆ ನೀಡಿದ್ದರು. ಆದರೆ ಕೆಲವು  ಬಾರ್‍ ಗಳು ಇದನ್ನು ಜಾರಿಗೆ ತಂದರೆ, ಮತ್ತೆ ಕೆಲವರು ಕಡೆಗಣಿಸಿದವು.

ಆದ್ದರಿಂದ ಈ ಸೂಚನೆಗಳನ್ನು ಪಾಲಿಸುವಂತೆ ಮದ್ಯದಂಗಡಿಗಳಿಗೆ ಮರು ಸೂಚನೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಲ್ಕೋಹಾಲ್ ಪರೀಕ್ಷೆ: 364 ಚಾಲಕರ ಮೇಲೆ ಕ್ರಮ

ಬಾರ್‍ ಗಳಿಂದ  ಹೊರಗೆ ಬಂದ ನಂತರ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ಇಡುವಂತೆ ಹಾಗೂ ಮದ್ಯಪಾನ ಪರೀಕ್ಷೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಕುಡಿದು ವಾಹನ ಚಲಾಯಿಸುವವರ ವಿರುದ್ಧದ ಅಭಿಯಾನದ ಭಾಗವಾಗಿ ಉತ್ತರ ಗೋವಾದಲ್ಲಿ ಗುರುವಾರ ತಡರಾತ್ರಿಯವರೆಗೆ 364 ಜನರನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸ್ ಉಪ ಅಧೀಕ್ಷಕ ಸಿದ್ಧಾಂತ್ ಶಿರೋಡ್ಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next