Advertisement

ಮನೆಯೊಳಗೆ ಒಳಚರಂಡಿ ನೀರು ನಿವಾಸಿಗಳ ಪರದಾಟ : ಪುರಸಭೆ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ

01:09 PM Oct 06, 2020 | sudhir |

ಗುಳೇದಗುಡ್ಡ: ಪಟ್ಟಣದ ಬಾಸೆಲ್‌ ಮಿಷನ್‌ ಕಾಂಪೌಂಡ್‌ ಆವರಣದಲ್ಲಿರುವ 8-10 ಮನೆಗಳಿಗೆ ಒಳಚರಂಡಿ ನೀರು ಮನೆಯೊಳಗೆ ಹರಿದು ಬರುತ್ತಿದೆ. ಇದರಿಂದ ನಿತ್ಯ ಗಬ್ಬು ವಾಸನೆಯಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

Advertisement

ಎಂಟೆತ್ತು ದಿನಗಳಿಂದ ಮನೆಗಳಲ್ಲಿ ಒಳಚರಂಡಿ ನೀರು ಬರುತ್ತಿದೆ. ಮನೆಯ ತುಂಬೆಲ್ಲ ಒಳಚರಂಡಿ ನೀರು ನಿಂತಿದೆ. ಅದರಲ್ಲೂ ಮೂರು ದಿನಗಳಿಂದ ಸಾಕಷ್ಟು ನೀರು ಬರುತ್ತಿದೆ. ಅದನ್ನು ಹೊರಗೆ ಹಾಕುವುದರಲ್ಲಿಯೇ ದಿನ ಕಳೆಯುತ್ತಿದೆ. ಚಿಕ್ಕ ಚಿಕ್ಕಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಎಲ್ಲಿ ಮಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಮಳೆಯಾದರೆ ಈ ಸಮಸ್ಯೆ ನಮಗೆ ತಪ್ಪಿದ್ದಲ್ಲ. ಮೊದಲೆಲ್ಲ ಮಳೆ ನೀರು ಹರಿದು ಚರಂಡಿ ಮೂಲಕ ಹಳ್ಳ ಸೇರುತ್ತಿತ್ತು. ಆದರೆ ಕಳೆದ ವರ್ಷ ರಸ್ತೆ ಮಾಡುವಾಗ ಪುರಸಭೆಯವರು ಮಳೆ ನೀರನ್ನು ನಮ್ಮ ಮನೆಗಳಿಗೆ ಹೊಂದಿಕೊಂಡಂತೆ ಇರುವ ಹೊಂಡಕ್ಕೆ ಹರಿದು ಬರುವಂತೆ ಮಾಡಿದರಿಂದ ಈ ಸಮಸ್ಯೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ಕಷ್ಟಪಡುತ್ತಿದ್ದೇವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ :ಡ್ರಗ್ ಪ್ರಕರಣದಲ್ಲಿ ತಲೆಮರೆಸಿಕೊಂಡವರಿಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸಹಾಯ!

ಚರಂಡಿ ನೀರಲ್ಲಿ ಅಡುಗೆ: ಸುನೀತಾ ನೀಲಗಾರ, ಬಂಡಿ ಎಂಬುವರ ಅಡುಗೆ ಮನೆಯಲ್ಲಿ ಒಳಚರಂಡಿ ನೀರು ಹರಿದು ಬಂದು ನಿಂತಿದ್ದು, ಇದರಿಂದ ಚರಂಡಿ ನೀರಲ್ಲಿಯೇ ನಿಂತು ಅಡುಗೆ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಜನರ ಆರೋಗ್ಯ ಕಾಪಾಡಬೇಕಾದ ಇಲಾಖೆಯೇ ಕಣ್ಣುಮುಚ್ಚಿ ಕುಳಿತಿದೆ. ನಮ್ಮ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು. ಮಳೆಯಾದಗಲೆಲ್ಲ ನಮ್ಮ ಮನೆಗಳಿಗೆ ಮಳೆ ನೀರಿನ ಜತೆಗೆ ಒಳಚರಂಡಿ ನೀರು ಹರಿದು ಬರುತ್ತಿದೆ. ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

ಇಲ್ಲದಿದ್ದರೇ ಎಲ್ಲರೂ ಸೇರಿಕೊಂಡು ಪ್ರತಿಭಟಿಸಬೇಕಾಗುತ್ತದೆ ಎಂದು ನಿವಾಸಿಗಳಾದ ದಾದಾಪೀರ ಶೇಖ್‌, ಜಾಕೋಬ ತಳವಾರ ಯಮನಪ್ಪ ನಾಯಕರ, ನಿರ್ಮಲಾ ಕರಡಿಗುಡ್ಡ, ರೋಮಿಲಾ ನೀಲಗಾರ, ಸುನಂದಾ ಕರಡಿಗುಡ್ಡ, ಸುರೇಶ ಬಂಡಿ, ಶೀಲಾ ಸುನಗಾರ, ಶಾಂತಾ ಬಿರನೂರ, ಮೋಹನ ಪೂಜಾರಿ, ಮಾರ್ಗರೇಟ್‌ ಬಿರನೂರ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next