Advertisement
ಕಾನ್ಪುರ ಜಿಲ್ಲೆಯ ಪ್ರೇಮ್‌ನಗರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಗ್ರಂಥಾಲಯದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿತ್ತು ದುರಸ್ಥಿ ಕಾರ್ಯವನ್ನು ನೋಡಲು ಶಿಕ್ಷಕರು ಹೋಗಿದ್ದರು ಈ ವೇಳೆ ಐದನೇ ತರಗತಿ ವಿದ್ಯಾರ್ಥಿ ಅಲ್ಲಿ ಹಾದು ಹೋಗಿದ್ದಾನೆ ಇದನ್ನು ಕಂಡ ಶಿಕ್ಷಕ ಹತ್ತಿರ ಕರೆದು ವಿದ್ಯಾರ್ಥಿಯಲ್ಲಿ ಎರಡರ ಮಗ್ಗಿ ಹೇಳುವಂತೆ ಹೇಳಿದ್ದಾರೆ ಆದರೆ ವಿದ್ಯಾರ್ಥಿಗೆ ಸರಿಯಾಗಿ ಮಗ್ಗಿ ಹೇಳಲು ಬರಲಿಲ್ಲ, ಇದರಿಂದ ಕೋಪಗೊಂಡ ಶಿಕ್ಷಕ ಅಲ್ಲೇ ಇದ್ದ ಡ್ರಿಲ್ ಮಷಿನ್ ಹಿಡಿದು ಐದನೇ ತರಗತಿಯಲ್ಲಿ ಇದ್ದೀಯಾ ಎರಡರ ಮಗ್ಗಿ ಬರುವುದಿಲ್ಲವೇ ಎಂದು ವಿದ್ಯಾರ್ಥಿಯ ಎಡಕೈಯನ್ನು ಕೊರೆದಿದ್ದಾರೆ ಈ ವೇಳೆ ವಿದ್ಯಾರ್ಥಿ ಬೊಬ್ಬೆ ಹಾಕಿದ್ದು ಇದನ್ನು ಕೇಳಿದ್ದ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿಗೆ ಬಂದಾಗ ಶಿಕ್ಷಕ ವಿದ್ಯಾರ್ಥಿಯ ಕೈಗೆ ಡ್ರಿಲ್ ಮಷಿನ್ನಿಂದ ಕೊರೆದಿರುವುದು ಬೆಳಕಿಗೆ ಬಂದಿದೆ ಆ ಕೂಡಲೇ ಎಚ್ಚೆತ್ತ ವಿದ್ಯಾರ್ಥಿ ಡ್ರಿಲ್ ಮಷಿನ್ ನ ಸ್ವಿಚ್ ಆಫ್ ಮಾಡಿದ್ದಾನೆ.ಗಾಯಗೊಂಡ ವಿದ್ಯಾರ್ಥಿ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಕೂಡಲೇ ಪೋಷಕರು ಶಾಲೆಗೆ ಬಂದು ಶಿಕ್ಷಕರ ವಿರುದ್ಧ ಕಿಡಿಕಾರಿದ್ದಾರೆ ಬಳಿಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Related Articles
Advertisement