Advertisement
ಈ ಮಾವಿನ ಮರ ಹೆದ್ದಾರಿಗೆ ತಾಗಿಕೊಂಡೇ ಇದೆ. 5 ತಿಂಗಳ ಹಿಂದೆ ಈ ಮರ ಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕದಳದವರು ಬಂದು ನಂದಿಸಿದ್ದರು. ಬಳಿಕ ಈ ಮರ ಒಣಗುತ್ತಾ ಬಂದಿದೆ. ಎರಡು ತಿಂಗಳ ಹಿಂದೆ ಇದರ ಗೆಲ್ಲುಗಳು ತುಂಡಾಗಿ ಹೆದ್ದಾರಿ ಮೇಲೆ ಬಿದ್ದಿತ್ತು.
ಕಳೆದ ಎರಡು ತಿಂಗಳಿನಿಂದ ಈ ಮರದ ಗೆಲ್ಲುಗಳು ಹೆದ್ದಾರಿಗೆ 5 ಬಾರಿ ಬಿದ್ದಿದೆ. ಪ್ರತಿ ಬಾರಿ ವಾಹನ ಹೋದ ಮೇಲೆ ಗೆಲ್ಲುಗಳು ಬಿದ್ದಿತ್ತು. ಶುಕ್ರವಾರ ಮಧ್ಯಾಹ್ನ 1ಗಂಟೆಯ ವೇಳೆಯಲ್ಲಿ ಒಣಗಿದ ಗೆಲ್ಲೊಂದು ಸ್ಕೂಟರ್ ಹೋದ ಅನಂತರ ಬಿದ್ದಿತ್ತು. ಸ್ವಲ್ಪದರಲ್ಲೇ ದುರಂತವೊಂದು ತಪ್ಪಿದಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಇದು ಆಗಿರುವ ಕಾರಣ ಇಲ್ಲಿ ವಾಹನಗಳು ವೇಗವಾಗಿ ಸಂಚರಿಸು ತ್ತವೆ. ಆ ವೇಳೆ ಮರದ ಗೆಲ್ಲು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೇ ಈ ಮರದ ಸಮೀಪದಲ್ಲಿಯೇ ವಿದ್ಯುತ್ ಕಂಬ, ಎಚ್‌ಟಿ ತಂತಿಗಳು ಹಾದು ಹೋಗುತ್ತಿದ್ದು ಅಪಾಯದ ಸಾಧ್ಯತೆಯನ್ನು ಹೆಚ್ಚು ಮಾಡಿದೆ. ಈ ಮರ ತೆರವಿಗೆ ಈಗಾಗಲೇ ಗಂಜಿಮಠ ಗ್ರಾಮ ಪಂಚಾಯತ್‌ನ ಅಧಿಕಾರಿಗಳ ಗಮನ ತರಲಾಗಿದೆ. ಪಂಚಾಯತ್‌ನಿಂದ ಮರ ಕಡಿಯಲು ಸಾಧ್ಯವಿಲ್ಲ. ಅವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ ಎನ್ನುತ್ತಾರೆ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ ಚಂದ್ರಹಾಸ.
Related Articles
Advertisement
ತಿರುವಿನಲ್ಲಿರುವ ಮರಮೂಡಬಿದಿರೆ ಕಡೆಯಿಂದ ಮಂಗಳೂರಿಗೆ ಬರು ವಾಗ ಸಿಗುವ ತಿರುವಿನ ಬಲಬದಿಯಲ್ಲಿರುವ ಈ ಮರ ಎದುರು ಬರುವ ವಾಹನ ಸವಾರರಿಗೆ ಕಾಣುವುದಿಲ್ಲ. ಅಲ್ಲದೇ ಹೆದ್ದಾರಿಯಲ್ಲಿ ಎತ್ತು ತಗ್ಗುಗಳೂ ಇವೆ. ಈಗಾಲೇ ಇಲ್ಲಿ ಎರಡು ಅಪಘಾತ ನಡೆದಿದ್ದು, ಮೂವರು ಸಾವನ್ನಪ್ಪಿದ್ದರು.