ಔರಂಗಾಬಾದ್: ಮಹಾರಾಷ್ಟ್ರದ ಪ್ರಖ್ಯಾತ ತುಳಜಾಭವಾನಿ ದೇವಸ್ಥಾನಕ್ಕೆ ಹಾಫ್ಪ್ಯಾಂಟ್, ದೇಹದ ಭಾಗಗಳು ಕಾಣಿಸುವಂಥ ಔಚಿತ್ಯದ ಪರಿಧಿ ಮೀರಿದ ವಸ್ತ್ರಗಳನ್ನು ಧರಿಸಿದವರಿಗೆ ಪ್ರವೇಶ ಇಲ್ಲ. ಹೀಗೆಂದು ದೇಗುಲದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಥಳದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿಯೂ ಮಂಡಳಿ ಹೇಳಿದೆ. ಒಸ್ಮಾನಾಬಾದ್ ಜಿಲ್ಲೆಯಲ್ಲಿರುವ ತುಳಜಾಪುರದಲ್ಲಿರುವ ಈ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ದೇಗುಲ ಪರಿಸರಕ್ಕೆ ಸೂಕ್ತವಾದ ವಸ್ತ್ರವನ್ನು ಧರಿಸುವಂತೆ ಭಕ್ತಾದಿಗಳಿಗೆ ಮನವಿ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗೇಶ್ ಶಿಟೋಲೆ ಹೇಳಿದ್ದಾರೆ.
Advertisement
ಮಹಾರಾಷ್ಟ್ರದ ಪ್ರಖ್ಯಾತ ತುಳಜಾಭವಾನಿ ದೇಗುಲ ಪ್ರವೇಶಕ್ಕೆ ವಸ್ತ್ರ ಸಂಹಿತೆ
08:52 PM May 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.