Advertisement

ಹೊಸಕೆರೆಯಲ್ಲಿ ಹೂಳೆತ್ತುವ ಕೆಲಸ ರೈತರ ಸಹಕಾರ ಅತ್ಯಗತ್ಯ

07:48 AM Jun 07, 2019 | Team Udayavani |

ಮುಳಬಾಗಿಲು: ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ತಾಲೂಕಿನ ಬಾಳಸಂದ್ರ ಹೊಸಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ತಾಲೂಕು ಯೋಜನಾಧಿಕಾರಿ ಸಂದ್ಯಾ ವಿ.ಶೆಟ್ಟಿ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು ನಮ್ಮ ಹಿರಿಯರು ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಕೆರೆ ನಿರ್ಮಾಣ ಮಾಡಿದ್ದಾರೆ. ಆದರೆ ಈಗಿನ ದಿನಮಾನದಲ್ಲಿ ಸರ್ಕಾರ ಹಾಗೂ ಜನಸಾಮಾನ್ಯರೂ ಕೆರೆಯ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿರುವುದರಿಂದ ಎಲ್ಲಾ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹಣೆ ಆಗುತ್ತಿಲ್ಲ. ಹೀಗಾಗಿ ಯೋಜನೆ ವತಿಯಿಂದ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ತಾಲೂಕಿಗೆ ವರ್ಷಕ್ಕೆ ಒಂದರಂತೆ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ 2017-18ನೇ ಸಾಲಿನಲ್ಲಿ ಬಂಡಾರಹಳ್ಳಿ ಗ್ರಾಮದ ನೀಲುವರಾತಿಕೆರೆ 18 ಲಕ್ಷ ರೂ.ಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಲಾಗಿದೆ. 2018-19ನೇ ಸಾಲಿನಲ್ಲಿ ಕುರುಡುಮಲೆ ಗ್ರಾಮದ ಬೈರೇಗೌಡನಕೆರೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಅದರಂತೆ 2019-20ನೇ ಸಾಲಿನಲ್ಲಿ ಬಾಳಸಂದ್ರ ಗ್ರಾಮದ ಹೊಸಕೆರೆಯನ್ನು ಕೆರೆ ಪುನಃಶ್ಚೇತನಗೊಳಿಸಲು ಆಯ್ಕೆ ಮಾಡಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪೂರಕವಾಗಿ ಈಗಾಗಲೇ ಸುಮಾರು 19.38 ಗುಂಟೆ ವಿಸ್ತೀರ್ಣ ಹೊಂದಿದ್ದು, ಈ ಕೆರೆ ಕಾಮಗಾರಿಗೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 12.32 ಲಕ್ಷ ಅನುದಾನ ಮಂಜೂರಾಗಿರುತ್ತದೆ. ಹೂಳೆತ್ತುತ್ತಿರುವ ಮಣ್ಣನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಿ ಜಮೀನನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next