Advertisement
ವಿಶ್ವ ಕ್ರಿಕೆಟ್ ಅಂಗಳದಲ್ಲಿ ಅಮೆರಿಕ ನಿಧಾನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಕುಂದಾಪುರ ತಾಲೂಕಿನ ಕೋಟ ಪಡುಕೆರೆಯ ನಿಖಿಲ್ ಕಾಂಚನ್ ಅವರದು!.
Related Articles
2014ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಒಳಾಂಗಣ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ನಿಖಿಲ್ ಅವರದು. ಈ ವರ್ಷ ಅಮೆರಿಕದಲ್ಲಿ ನಡೆದ ಐಪಿಎಲ್ ಮಾದರಿಯ ಪಂದ್ಯವೊಂದರಲ್ಲಿ ಆಂಡ್ರೆ ರಸೆಲ್ ನಾಯಕತ್ವದ ತಂಡದ ವಿರುದ್ಧ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಸತತ 3 ವರ್ಷ ಯೂನಿವರ್ಸಿಟಿ ಆಫ್ ಮಿಚಿಗನ್ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ನಾಯಕ ನಿಖಿಲ್ ಪಾತ್ರ ಮಹತ್ವದ್ದಾಗಿದೆ.
Advertisement
2 ಗಂಟೆ ನೆಟ್ ಪ್ರಾಕ್ಟೀಸ್ಬಲಗೈ ಬ್ಯಾಟ್ಸ್‌ಮನ್ ನಿಖಿಲ್ ಅಮೆರಿಕದ ಹಲವು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಈಗಾಗಲೇ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದಾರೆ. ಮುಂದಿನ ವರ್ಷದಿಂದ ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಸಿಗಲಿದೆ. ಕೆಲಸದ ಮಧ್ಯೆಯೂ ದಿನಕ್ಕೆರಡು ಗಂಟೆ ನೆಟ್ ಪ್ರ್ಯಾಕ್ಟೀಸ್ ಮಾಡುತ್ತಿದ್ದೇನೆ ಎಂದು ನಿಖಿಲ್ ಅಮೆರಿಕದಿಂದ “ಉದಯವಾಣಿ’ಗೆ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬ್ರಹ್ಮಾವರದ ಲಿಟ್ಲರಾಕ್ ಇಂಡಿಯನ್ ಸ್ಕೂಲ್, ಪಿಯು ಕೋಟದ ವಿವೇಕ ಕಾಲೇಜು, ಇಂಜಿನಿಯರಿಂಗ್ ಬೆಂಗಳೂರು ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಅಮೆರಿಕದ ಮಿಚಿಗನ್ ವಿವಿಯಲ್ಲಿ ಪೂರೈಸಿದ್ದಾರೆ. ಕೊಹ್ಲಿ ನೆಚ್ಚಿನ ಆಟಗಾರ
ಅಮೆರಿಕ ತಂಡದಲ್ಲಿ ಆಡುವ ಕನಸು ಕಾಣುತ್ತಿರುವ ನಿಖಿಲ್‌ಗೆ ಭಾರತೀಯ ತಂಡದ ಕಪ್ತಾನ ವಿರಾಟ್ ಕೊಹ್ಲಿಯೆಂದರೆ ಅಚ್ಚು ಮೆಚ್ಚು. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಅಭ್ಯಾಸದ ವೇಳೆ ಕೊಹ್ಲಿ ಸಹಿತ ಎಲ್ಲ ಆಟಗಾರರಿಗೆ ಬೌಲಿಂಗ್ ಮಾಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ ನಿಖಿಲ್.