Advertisement
ಒಂದು ಪಟ್ಟಣ. ಒಂದು ದಿನ ಮುಂಜಾನೆ ಒಬ್ಬಳು ಸುಂದರಿ ಅಲ್ಲಿ ಪ್ರತ್ಯಕ್ಷಳಾದಳು. ಆಕೆ ಎಲ್ಲಿಂದ ಬಂದಳು, ಊರ್ಯಾವುದು, ಕುಲಗೋತ್ರ ಯಾರಿಗೂ ತಿಳಿದಿರಲಿಲ್ಲ. ಆಕೆ ಮಾತ್ರ ಪರಮ ಸುಂದರಿ. ಆಕೆಯ ಸುತ್ತ ಇಡೀ ಪಟ್ಟಣದವರು ಜಮಾಯಿಸಿದರು. ಯುವಕರು ನಾ ಮುಂದು ತಾಮುಂದು ಎಂದು ಆಕೆಯನ್ನು ವರಿಸಲು ಹಾತೊರೆ ದರು. ಮುನ್ನೂರು ಮಂದಿ ಯೌವ್ವನಿಗರು ಆಕೆಯನ್ನು ವಿವಾಹ ವಾಗಲು ಸಿದ್ಧರಿದ್ದರು.
Related Articles
Advertisement
ಮೂವರೂ ಸಾಕಷ್ಟು ಶ್ರಮಿಸಿದರು. ಆದರೆ ಮರುದಿನ ಒಬ್ಬ ಯುವಕ ಮಾತ್ರ ಆಕೆಯಿದ್ದಲ್ಲಿಗೆ ಬಂದ. ಆತನ ಆಗಮನವೇ ಆತ ನಲ್ಲಾದ ಬದಲಾ ವಣೆಯನ್ನು ಸಾರಿಹೇಳು ತ್ತಿತ್ತು. ಆ ಯುವಕನ ಮುಖ ಅಪೂರ್ವ ತೇಜಸ್ಸಿನಿಂದ ಕೂಡಿತ್ತು.
ಯುವತಿ ಅವನ ಕೈಹಿಡಿದು ಪಟ್ಟಣದ ಹೊರಗೆ ತನ್ನ ಮನೆಗೆ ಕರೆದೊಯ್ದಳು. ಆ ಮನೆ ಅಲೌಕಿಕವಾಗಿತ್ತು. ಸ್ವರ್ಗಸದೃಶ ವಾಗಿತ್ತು. ಮನೆಯ ಹೆಬ್ಟಾಗಿಲಿನಲ್ಲಿ ಯುವತಿಯ ಹೆತ್ತವರು ನಿಂತಿದ್ದರು. ಅವರೊಡನೆ ಮಾತನಾಡುತ್ತ ಯುವಕ ಸ್ವಲ್ಪ ಹೊತ್ತು ನಿಂತ, ಯುವತಿ ಮನೆಯೊಳಗೆ ಹೊಕ್ಕಳು. ಮಾತುಕತೆಯ ಬಳಿಕ ಅವಳ ಹೆತ್ತವರು ಯುವಕನಿಗೆ ಹೇಳಿದರು, “ಒಳಗೆ ಹೋಗು, ಅವಳು ಕಾಯುತ್ತಿರಬಹುದು…’
ಯುವಕ ಒಳಹೊಕ್ಕ. ಆದರೆ ಅಲ್ಲಿ ಯಾರೂ ಇರಲಿಲ್ಲ. ಹಿಂದಿನ ಬಾಗಿಲು ತೆರೆದಿತ್ತು. ಆಕೆ ಎಲ್ಲೋ ಹೋಗಿದ್ದಂತೆ ಪಾದದ ಅಚ್ಚುಗಳಿದ್ದವು. ಯುವಕ ಅದನ್ನನುಸರಿಸಿ ನಡೆದ. ಪಥ ಒಂದು ನದಿಯ ದಂಡೆಯಲ್ಲಿ ಕೊನೆಯಾಗಿತ್ತು. ಅಲ್ಲೂ ಯುವತಿ ಇರಲಿಲ್ಲ. ಹೆಜ್ಜೆಯ ಅಚ್ಚುಗಳು ಅಲ್ಲಿ ಕೊನೆಯಾಗಿದ್ದವು. ಅಲ್ಲಿ ಯುವತಿಯ ಎರಡು ಸ್ವರ್ಣ ಪಾದರಕ್ಷೆಗಳಿದ್ದವು.
ಯುವಕನಿಗೆ ಅಚ್ಚರಿ. ಆತ ಹಿಂದಿರುಗಿ ನೋಡಿದ. ತಾನು ನಡೆದು ಬಂದಿದ್ದ ದಾರಿ, ಮನೆ ಎಲ್ಲವೂ ಮಾಯವಾಗಿದ್ದವು. ಮುಂದೆ ತಿರುಗಿದರೆ ನದಿ, ಪಾದರಕ್ಷೆಗಳೂ ಮಾಯ. ಎಲ್ಲೆಡೆಯೂ ಅನಂತ ಶೂನ್ಯ ಮತ್ತು ಜ್ಞಾನೋದಯದ ನಗು ಕೇಳಿಸುತ್ತಿತ್ತು. ಯುವಕನಲ್ಲೂ ಮೆಲು ನಗು ಮೂಡಿತು.
ಜ್ಞಾನಪಥ, ಮೋಕ್ಷಪಥದಲ್ಲಿ ನಮ್ಮನ್ನು ಗುರು ಮುನ್ನಡೆಸುವುದು ಹೀಗೆ.
(ಸಾರ ಸಂಗ್ರಹ)