Advertisement
ಬೆಳ್ತಂಗಡಿ: ದೇಶಕ್ಕೆ ಸ್ವಾತಂತ್ರ್ಯಲಭಿಸಿ 75 ವರ್ಷ ಸಂದರೂ ಸವಣಾಲು ಗ್ರಾಮದ ಅರಣ್ಯವಾಸಿಗಳ ಮೂಲಸೌಕರ್ಯದ ರೋಧನ ರಾಜ್ಯ ರಾಜಧಾನಿಗೆ ತಲುಪದ ಪರಿಣಾಮ ಗ್ರಾಮವಾಸಿಗಳ ಬದುಕಿಗೆ ಅಂಧಕಾರ ಕವಿದಿದೆ.
Related Articles
Advertisement
ವಿದ್ಯುತ್ ಸಂಪರ್ಕದ ಏಕೈಕ ಪ್ರದೇಶಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 9 ಗ್ರಾಮಗಳಿವೆ. ಸುಮಾರು 15ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿವೆ. ಹಿತ್ತಿಲಪೇಲ, ಕಂಬುಜೆ ಹೊರತುಪಡಿಸಿ ಉಳಿದ ಯಾವುದೇ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಎಂಬುದು ಗಮನಾರ್ಹ. ರಸ್ತೆ, ವಿದ್ಯುತ್ ವಂಚಿತ ಗ್ರಾಮಗಳು
ಪಿಲಿಕಲ, ಕಂಬುಜೆ ಪ್ರದೇಶಕ್ಕೆ ಸೇರಿದ ಕೇವಲ 9 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಪ್ರದೇಶದ ಸವಣಾಲು-ಮಂಜದಬೆಟ್ಟು- ಪಿಕಲ ರಸ್ತೆ, ಕಾಳಿ ಕಾಂಬ ದೇವಸ್ಥಾನದಿಂದ-ಮೀಯ ರಸ್ತೆ, ಕಾಳಿ ಕಾಂಬ ದಣೆವಸ್ಥಾನದಿಂದ ದೇಂನ¤ಜೆ, ಜಾಲಡೆ ರಸ್ತೆ, ಮಂಜದಬೆಟ್ಟು-ಇತ್ತಿಲಪೇಲ ರಸ್ತೆ, ನರ್ತಿ ಕಲ್ಲಿನಿಂದ- ಮುಂಡೂರು ರಸ್ತೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಅರಣ್ಯ ಇಲಾಖೆಯ ಆಕ್ಷೇಪ
ಕುದುರೆಮುಖ ರಾ. ಉದ್ಯಾನವನ ವ್ಯಾಪ್ತಿ ಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಿಂದಿನಿಂದಲೂ ವನ್ಯಜೀವಿ ಅರಣ್ಯ ಇಲಾಖೆ ಅರಣ್ಯ ಸಂರಕ್ಷಣ ಕಾಯ್ದೆ 1980ರ ಅಡಿಯಲ್ಲಿ ಅಡ್ಡಿಪಡಿಸುತ್ತಿದೆ ಎಂಬುದು ಇಲ್ಲಿನ ನಾಗರಿಕರ ಆರೋಪ. ಇದರ ಬದಲಾಗಿ ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿ ಮಾಡಬೇಕು ಎಂಬುದು ಜನರ ಒತ್ತಾಯ. ಅರಣ್ಯ ಸಂರಕ್ಷಣ ಕಾಯಿದೆ ಪ್ರಕಾರ ಯೋಜನೆಯನ್ನು ಕಾರ್ಯ ಗತಗೊಳಿಸುವ ಇಲಾಖೆಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದು ಅರಣ್ಯ ಇಲಾಖೆಯ ವಾದ. ಆದರೆ ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಯಾವುದೇ ಆನ್‌ಲೈನ್ ಅರ್ಜಿ ಅಗತ್ಯವಿಲ್ಲ. ಗ್ರಾಮ ಅರಣ್ಯ ಸಮಿತಿಯ ನಿರ್ಣಯದಂತೆ ಸಂಬಂಧಿಸಿದ ಇಲಾಖೆಗಳು ತಮ್ಮ ಅಭಿಪ್ರಾಯವನ್ನು ವಿಭಾಗ ಮಟ್ಟದ ಅರಣ್ಯ ಸಮಿತಿಗೆ ಸಲ್ಲಿಸಬೇಕು. ಬಳಿಕ ಜಿಲ್ಲಾ ಅರಣ್ಯ ಸಮಿತಿಯ ಸಭೆಯಲ್ಲಿ ಅಂಗೀಕಾರಗೊಂಡು ರಾಜ್ಯ ಮಟ್ಟದ ಸಮಿತಿ ಯಲ್ಲಿ ನಿರ್ಣಯ ಅಂಗೀಕಾರಗೊಂಡರೆ ಅನು ಮತಿ ಸಿಗುತ್ತದೆ. ಆದರೆ ಅರಣ್ಯ ಇಲಾಖೆ ಮಾತ್ರ ಅರಣ್ಯ ಸಂರಕ್ಷಣ ಕಾಯ್ದೆ 1980ರಡಿ ಆನ್‌ಲೈನ್ ಅರ್ಜಿಗಾಗಿ ಪಟ್ಟು ಹಿಡಿದಿದೆ. ಅಧಿವೇಶನದಲ್ಲೂ ಚರ್ಚೆ
ಕಳೆದ ವರ್ಷ ವಿಧಾನಸಭೆ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೇಳಿದ ಚುಕ್ಕೆ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರಕಾರ, ಅರಣ್ಯ ಹಕ್ಕು ಕಾಯ್ದೆ 2006ರ ಪ್ರಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸ ಬೇಕಾಗಿಲ್ಲ ಎಂಬುದನ್ನು ಲಿಖೀತವಾಗಿ ತಿಳಿಸಿ ದರೂ ವನ್ಯಜೀವಿ ಅರಣ್ಯ ಇಲಾಖೆ ಮಾತ್ರ ತನ್ನ ಪಟ್ಟು ಸಡಿಲಿಸದಿರುವುದು ದುರಂತ. ದೇಶಕ್ಕೆ ಸ್ವಾತಂತ್ರ್ಯಲಭಿಸಿ 75 ವರ್ಷ ಗಳಾಗಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಸಂದರ್ಭದಲ್ಲಿ ಅವಕಾಶ ವಂಚಿತರಾದವರ ನೆರವಿಗೆ ಧಾವಿಸುವ ಅಗತ್ಯವಿದೆ. ನೆಟ್‌ವರ್ಕ್ ಸಮಸ್ಯೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 9 ಗ್ರಾಮಗಳಲ್ಲಿ ಸರಿಸುಮಾರು 1823 ಜನಸಂಖ್ಯೆ ಇದೆ. ಆನ್‌ಲೈನ್ ತರಗತಿಗಳು ನಡೆಯುತ್ತಿದ್ದರೂ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಿದ್ದಾರೆ. ಸೇತುವೆ ನಿರ್ಮಾಣ ಮರೀಚಿಕೆ
ಕೋಡಿಮುಗೇರು ಸುಳೊÂàಡಿ ಸಂಪರ್ಕಿಸುವಲ್ಲಿ ಸೇತುವೆ ನಿರ್ಮಾಣವಾಗಬೆಕಿದೆ. ಇದು ಸ್ವಾತಂತ್ರ್ಯ ಪೂರ್ವದ ಬೇಡಿಕೆ. ಇಲ್ಲಿ 15 ಕುಟುಂಬವಿರುವ ಎಸ್.ಟಿ. ಕುಟುಂಬ ಅನಾಥವಾಗಿದೆ. ಈ ಹಿಂದೆ 15 ಕೋ.ರೂ. ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯ. ಇತರ ಸಮಸ್ಯೆಗಳೇನು?
-ಸಾರ್ವಜನಿಕ ರಸ್ತೆಯಲ್ಲಿಲ್ಲ ದಾರಿದೀಪ
-ಡಾಮರು, ಕಾಂಕ್ರೀಟ್ ಕಾಣದ ಕಚ್ಚಾರಸ್ತೆ
-ಅನುಷ್ಠಾನವಾಗದ ಶಾಶ್ವತ ಕುಡಿಯುವ ನೀರಿನ ಯೋಜನೆ
-ಬಸ್ ಸೌಕರ್ಯದ ಕೊರತೆ -ಚೈತ್ರೇಶ್ ಇಳಂತಿಲ