Advertisement

RudraM-II: ರುದ್ರ ಎಂ-ಐಐ ಕ್ಷಿಪಣಿ ಪರೀಕ್ಷೆ ಯಶಸ್ವಿ… ವಾಯುಪಡೆಗೆ ಬಲ

10:19 AM May 30, 2024 | Team Udayavani |

ಹೊಸದಿಲ್ಲಿ: ಡಿಆರ್‌ಡಿಒನಿಂದ “ರುದ್ರ ಎಂ-ಐಐ’ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಇದರೊಂದಿಗೆ ಭಾರತೀಯ ವಾಯುಪಡೆಗೆ ಬಲ ಹೆಚ್ಚಾಗಿದೆ.

Advertisement

ವಾಯುಪಡೆಯ ಎಸ್‌ಯು-30 ಯುದ್ಧ ವಿಮಾನದ ಮೂಲಕ ಒಡಿಶಾ ಕರಾವಳಿ ಪ್ರದೇಶದಲ್ಲಿ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿಯು ಎಲ್ಲ ರೀತಿಯ ಪ್ರಾಯೋಗಿಕ ಉದ್ದೇಶಗಳನ್ನು ಪೂರೈಸಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ. ರುದ್ರ ಎಂ-ಐಐ ಕ್ಷಿಪಣಿಯು ಡಿಆರ್‌ಡಿಒನ ಪ್ರಯೋಗಾಲಯಗಳಲ್ಲಿ ಸಿದ್ಧವಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಗಮನಾರ್ಹ ಅಂಶವೆಂದರೆ ದೇಶಿಯವಾಗಿ ಅಭಿವೃದ್ಧಿಗೊಳಿಸಿದ ತಂತ್ರಜ್ಞಾನದ ಮೂಲಕ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಲಾಗಿದೆ. ಪರೀಕ್ಷೆ ಯಶಸ್ಸುಗೊಂಡದ್ದಕ್ಕೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : LOC ಬಳಿ ಚೀನದಿಂದ ರಕ್ಷಣ ಸೌಲಭ್ಯ ನಿರ್ಮಾಣ: ಪಾಕ್‌ ಜತೆಗೂಡಿ 3 ವರ್ಷದಿಂದ ಈ ಕಾರ್ಯಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next