Advertisement

ಡಿಆರ್‌ಡಿಒದ ಕ್ಷಿಪಣಿ ಛೇದನ ಪರೀಕ್ಷೆ ಯಶಸ್ವಿ : ರಕ್ಷಣ ಸಚಿವರಿಂದ ಅಭಿನಂದನೆ 

11:23 PM Apr 08, 2022 | Team Udayavani |

ಬಾಲಸೋರ್‌: ಡಿಆರ್‌ಡಿಒ (ಭಾರತದ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕ್ಷಿಪಣಿ ಛೇದನ ವ್ಯವಸ್ಥೆಯೊಂದನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.

Advertisement

ಇದರಿಂದ ಭಾರತದ ಕ್ಷಿಪಣಿಗಳು, ಅಪಾಯಕಾರಿ ಸಾಧನಗಳು ದೂರದಲ್ಲಿರುವಂತೆಯೇ ಅಲ್ಲಿಗೆ ವೇಗವಾಗಿ ನುಗ್ಗಿ ಹೊಡೆದುರುಳಿಸುವ ಶಕ್ತಿಯನ್ನು ಪಡೆದುಕೊಳ್ಳಲಿವೆ.

ಈ ಪರೀಕ್ಷೆ ಒಡಿಶಾದ ಚಂಡೀಪುರ ಕರಾವಳಿ ತೀರದಲ್ಲಿ ನಡೆದಿದೆ. ಸದ್ಯ ಡಿಆರ್‌ಡಿಒ ಪರೀಕ್ಷೆಗೊಳಪಡಿಸಿರುವ ಎಸ್‌ಎಫ್ಡಿಆರ್‌ (ದ ಸಾಲಿಡ್‌ ಫ್ಯೂಯೆಲ್‌ ಡಕ್ಟೆಡ್‌ ರ್ಯಾಮೆjಟ್‌) ಎಂದು ಕರೆಯಲಾಗಿದೆ.

ಈ ಯಶಸ್ಸಿನಿಂದ ಡಿಆರ್‌ಡಿಒಗೆ ಬಹಳ ನೆರವಾಗಿದೆ. ಹಲವಾರು ಪ್ರಯೋಗಗಳ ಮೂಲಕ ಪ್ರೊಪಲ್ಶನ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವುದು ಖಚಿತವಾಗಿದೆ ಎಂದು ಕೇಂದ್ರ ರಕ್ಷಣ ಸಚಿವಾಲಯ ಹೇಳಿದೆ. ಈ ಸಾಧನೆಗೆ ಡಿಆರ್‌ಡಿಒವನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ಮೋಹನ್‌ದಾಸ್‌ ಪೈ ಟ್ವೀಟ್:ಸರ್ಕಾರದ ಯೋಗ್ಯತೆ ಪ್ರಶ್ನಿಸಿದ ಎಚ್‌ಡಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next