Advertisement

“ಅಗ್ನಿ-2′ರಾತ್ರಿ ಪರೀಕ್ಷೆ ಯಶಸ್ವಿ

12:15 AM Nov 17, 2019 | Team Udayavani |

ಬಾಲಸೋರ್‌: ಒಡಿಶಾ ಕರಾವಳಿ ತೀರದಲ್ಲಿರುವ ಬಾಲಸೋರ್‌ನಲ್ಲಿ ನಡೆಸಲಾದ ಅಗ್ನಿ-2 ಖಂಡಾಂತರ ಕ್ಷಿಪಣಿಯ ರಾತ್ರಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

Advertisement

ಬಾಲಸೋರ್‌ನಲ್ಲಿರುವ ಡಾ| ಅಬ್ದುಲ್‌ ಕಲಾಂ ದ್ವೀಪದಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು, ಅದು ಯಶಸ್ವಿಯಾಗಿ ಗುರಿ ತಲುಪಿದೆ. ಈ ಕ್ಷಿಪಣಿಯು 2 ಸಾವಿರ ಕಿ.ಮೀ.ವರೆಗೆ ಸಾಗುವ ಛಾತಿ ಹೊಂದಿದ್ದು, ಇದನ್ನು ಈಗಾಗಲೇ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಕ್ಷಿಪಣಿಯ ರಾತ್ರಿ ವೇಳೆಯ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next