Advertisement
ಎಲ್ಲೆಡೆ ಶುರುವಾಗಿರುವ ಟ್ರೆಂಡ್!ಹೈಪರ್‌ಸಾನಿಕ್ ಕ್ಷಿಪಣಿಗಳ ತಯಾರಿಕೆಯು ಈಗ ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮೊದಲ ಆಯ್ಕೆ ಎನಿಸಿವೆ. ಪರ ಮಾಣು ದಾಳಿಗಳ ನಿಗ್ರಹ ಹಾಗೂ ಮುಂಚೂಣಿ ದಾಳಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಗಳ ಪಾತ್ರ ಹಿರಿದು ಎಂದು ಹೇಳಲಾಗಿದೆ. ಹಾಗಾಗಿ, ಚೀನ, ರಷ್ಯಾ ಹಾಗೂ ಅಮೆರಿಕ ಈ ಮಾದರಿಯ ಕ್ಷಿಪಣಿಗಳ ತಯಾರಿಕೆಯ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿವೆ. ಅದೇ ನಿಟ್ಟಿನಲ್ಲಿ ಭಾರತವೂ ಮುಂದಡಿ ಇಟ್ಟಿದ್ದು, ಕೆಲವೇ ದಿನಗಳಲ್ಲಿ ನಮ್ಮಲ್ಲೂ ಪರಿಣಾಮಕಾರಿ ಶಸ್ತ್ರಾಸ್ತ್ರಗಳು ಸಿದ್ಧವಾಗಲಿರುವುದು ನಿಶ್ಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಪರ್‌ಸಾನಿಕ್ ಕ್ಷಿಪಣಿಗಳ ತಯಾರಿಕೆ ನಡುವೆಯೇ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನವನ್ನೂ ಅಭಿವೃದ್ಧಿಗೊಳಿಸಲು ಡಿಆರ್‌ಡಿಒ ನಿರ್ಧರಿಸಿದೆ. ಆಧುನಿಕ ಶಸ್ತ್ರಾಸ್ತ್ರ, ಸುರಕ್ಷಾ ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ತಾನು ಸಂಶೋಧನೆ ನಡೆಸಿ ಅಭಿವೃದ್ಧಿ ಪಡಿಸಿರುವ 1,500ಕ್ಕೂ ಹೆಚ್ಚು ಪರಿಕರಗಳ ಪೇಟೆಂಟ್‌ಗಳನ್ನು ಡಿಆರ್‌ಡಿಒ ಹೊಂದಿದೆ. ಜತೆಗೆ ಟ್ರಾನ್ಸ್‌ಫರ್ ಆಫ್ ಟೆಕ್ನಾಲಜಿ (ಟಿಒಟಿ) ಒಪ್ಪಂದಕ್ಕಿದ್ದ ಶುಲ್ಕವನ್ನು ಶೇ. 20ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಏನಿದು ಹೈಪರ್‌ಸಾನಿಕ್?
ಸಾಮಾನ್ಯ ವಾತಾವರಣ ದಲ್ಲಿ ಶಬ್ದದ ಅಲೆಗಳು ಸಾಗುವ ವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗದಿಂದ ಸಾಗುವ ಸಾಮರ್ಥ್ಯ ಹೊಸ ಕ್ಷಿಪಣಿ ಗಳಿಗೆ ಇರಲಿದೆ. ಈ ತಂತ್ರ ಜ್ಞಾನಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ಈಗಾ ಗಲೇ ಸಾಗು ತ್ತಿದ್ದು, ಅದರ ಪ್ರಯೋಗ ಗಳಿಗಾಗಿ ಒಂದು ಸುರಂಗ ವನ್ನು ನಿರ್ಮಿಸ ಲಾಗಿದೆ ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Related Articles
– ಸದ್ಯಕ್ಕೆ ನಮ್ಮಲ್ಲಿರುವ ಖಂಡಾಂತರ ಕ್ಷಿಪಣಿಗಳು (ಐಸಿಬಿಎಂ) ಅತೀ ವೇಗದಲ್ಲಿ ಸಾಗಬಲ್ಲ ಕ್ಷಿಪಣಿಗಳಾಗಿವೆ. ಆದರೆ ಹೈಪರ್ ಸಾನಿಕ್ ಕ್ಷಿಪಣಿಗಳು ಅವುಗಳಿಗಿಂತ ಹೆಚ್ಚು ವೇಗವಾಗಿ ಸಾಗಬಲ್ಲವು .
Advertisement
– ನಾವು ಉಡಾಯಿಸುವ ಕ್ಷಿಪಣಿಗಳನ್ನು ಹಾಗೂ ಅವು ಸಾಗುವ ಮಾರ್ಗಗಳನ್ನು ಪತ್ತೆಹಚ್ಚಿ ಅವುಗಳನ್ನು ನಾಶಪಡಿಸುವುದು ಈಗ ಲಭ್ಯವಿರುವ ತಂತ್ರಜ್ಞಾನದಲ್ಲಿ ಶತ್ರು ರಾಷ್ಟ್ರಗಳಿಗೆ ಸಾಧ್ಯ. ಆದರೆ ಹೈಪರ್‌ಸಾನಿಕ್ ಕ್ಷಿಪಣಿಗಳ ಪತ್ತೆ ಅಸಾಧ್ಯವಾಗಿದೆ.
– ಈ ಕ್ಷಿಪಣಿಗಳು ಪರಮಾಣು ಸಹಿತ ಇನ್ನಿತರ ಮಾದರಿಯ ಸ್ಫೋಟಕಗಳನ್ನು ನಿಖರ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲವು.