ಹೊಸದಿಲ್ಲಿ: ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಯೋಧರನ್ನು ಕಡು ಚಳಿಯಲ್ಲೂ ಬೆಚ್ಚಗೆ ಇರಿಸುವ ದಿರಿಸು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ದೇಶದ ಐದು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಿದೆ.
ಹೊಸದಿಲ್ಲಿಯ ಮೆಸರ್ಸ್ ಆರ್‌ಎಚ್‌ಡಿ ಬಿಸಿನೆಸ್ ಸರ್ವಿಸಸ್ ಇಂಡಿಯಾ ಪ್ರೈ. ಲಿ., ಮೆಸರ್ಸ್ ಎಸ್‌ಬಿಎನ್‌ಎಕ್ಸ್ ಇನ್ನೊವೇಶನ್ (ಒಪಿಸಿ) ಪ್ರೈ.ಲಿ., ಕೊಯಮತ್ತೂರಿನ ಮೆಸರ್ಸ್ ಶಿವ ಟೆಕ್ಸ್‌ಯಾರ್ನ್ ಲಿಮಿ ಟೆಡ್, ಮುಂಬಯಿಯ ಮೆಸರ್ಸ್ ಕುಸುಮ್‌ಗಾರ್ ಕಾರ್ಪೋರೆಟ್ಸ್ ಪ್ರೈ. ಲಿ., ಮಥು ರಾದ ಮೆಸರ್ಸ್ ಗಿನ್ನಿ ಫಿಲಮೆಂಟ್ಸ್ ಲಿಮಿ ಟೆಡ್‌ಗಳಿಗೆ ಈ ತಂತ್ರಜ್ಞಾನ ನೀಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ನ್ಯೂಸ್-18′ ವರದಿ ಮಾಡಿದೆ.
ಡಿಆರ್‌ಡಿಒದ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಆ್ಯಂಡ್ ಅಲೈಡ್ ಸೈನ್ಸಸ್ (ಡಿಐಪಿಎಸ್) ಲಡಾಖ್ ಸೇರಿದಂತೆ ಅತ್ಯಂತ ಕಡು ಚಳಿ ಪ್ರದೇಶದಲ್ಲಿ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವ ಯೋಧರನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ:ಬೂಸ್ಟರ್ ಡೋಸ್ ಪಡೆಯಲು ವಾಕ್-ಇನ್ ಮೂಲಕ ನೋಂದಣಿ
ಈ ವರ್ಷದ ಮೇಯಲ್ಲಿ ಸೇನೆಯೇ ಅಂದಾಜು ಮಾಡಿದ್ದ ಪ್ರಕಾರ ವಾರ್ಷಿಕವಾಗಿ 50 ಸಾವಿರದಿಂದ 90 ಸಾವಿರ ಬೆಚ್ಚಗಿನ ಉಡುಪು ಯೋಧರಿಗೆ ಅಗತ್ಯ ಬೀಳುತ್ತದೆ ಎಂದು ಅಂದಾಜಿಸಿತ್ತು. ಖಾಸಗಿಯವರಿಗೆ ಈ ತಂತ್ರಜ್ಞಾನ ಹಸ್ತಾಂತರ ಮಾಡುವುದ ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಂಥ ಉಡುಪುಗಳನ್ನು ಸಿದ್ಧಪಡಿಸಲು ಅನು ಕೂಲವಾಗುತ್ತದೆ ಎಂಬುದು ಸರಕಾರದ ಪ್ರತಿಪಾದನೆ.