ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನವೆಂಬರ್‌ನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಫಲಿತಾಂಶ ಮೌಲ್ಯಮಾಪನ ಮುಗಿದ 20 ಗಂಟೆಯಲ್ಲಿ ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಈ ಬಾರಿ ಪರೀಕ್ಷೆ ಬರೆದಿರುವ 36,779 ವಿದ್ಯಾರ್ಥಿಗಳಲ್ಲಿ 34,142 ಮಂದಿ ಉತ್ತೀರ್ಣರಾಗಿ ಶೇ.92.78 ಫಲಿತಾಂಶ ಬಂದಿದೆ. ಲೋಯರ್ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 19,914 ವಿದ್ಯಾರ್ಥಿಗಳ ಪೈಕಿ 18,260 ಮಂದಿ ಉತ್ತೀರ್ಣರಾದರೆ (ಶೇ 91.69), ಹೈಯರ್ ವಿಭಾಗದಲ್ಲಿ 16,885 ವಿದ್ಯಾರ್ಥಿ ಗಳ ಪೈಕಿ 15,882 ಮಂದಿ (ಶೇ 94.06) ಪಾಸಾಗಿದ್ದಾರೆ.
ಕಳೆದ ವರ್ಷ 36,112 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ದ್ದರು. ಈ ಪೈಕಿ 32,811 ಮಂದಿ ಉತ್ತೀ ರ್ಣರಾದರೆ, 3301 ಮಂದಿ ಅನುತ್ತೀರ್ಣ ರಾಗಿದ್ದರು. ಶೇ 90.86 ಫಲಿತಾಂಶ ದಾಖಲಾಗಿತು. ರಾಜ್ಯದ 243 ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 20ರಿಂದ 22ರವರೆಗೆ ಪರೀಕ್ಷೆ ನಡೆದಿತ್ತು. ಡಿ. 6ರಿಂದ 12ರವರೆಗೆ ದಾವಣಗೆರೆಯ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಬಿಇಎ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ನಡೆದಿತ್ತು.
ಇದೇ ಪ್ರಥಮ ಬಾರಿಗೆ ಆನ್‌ಲೈನ್ ಮಾರ್ಕ್ ಪೋರ್ಟಿಂಗ್ ಮುಖಾಂತರ ನೇರ ವಾಗಿ ಮೌಲ್ಯಮಾಪನ ಕೇಂದ್ರದಿಂದ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಅಂಕಗಳನ್ನು ಮಂಡಳಿಯ ಸರ್ವರ್‌ಗೆ ಪಡೆದು ಫಲಿತಾಂಶ ಪ್ರಕ್ರಿಯೆ ಪೂರ್ಣ ಗೊಳಿಸಲಾಗಿದೆ. ಒಟ್ಟು 36,779 ವಿದ್ಯಾರ್ಥಿಗಳ (+6 ವಿಷಯಗಳ) 2,20,794 ಡಾಟಾ ಸಂಗ್ರಹಿಸಲಾಗಿದೆ. ಫಲಿತಾಂಶವು ಕೇಂದ್ರಗಳ ಎಸ್‌ಎಸ್‌ಎಲ್‌ಸಿ ಲಾಗಿನ್‌ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೂ ಫಲಿತಾಂಶ ರವಾನಿಸಲಾಗಿದೆ.
ಯಾವುದೇ ಮ್ಯಾನ್ಯು ಯಲ್ ಫಲಿತಾಂಶ ಪಟ್ಟಿಯನ್ನು ಕೇಂದ್ರ ಗಳಿಗೆ ಒದಗಿಸಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿತ್ರಕಲಾ ಪರೀಕ್ಷೆಗಳು ಮಂಡಳಿ ಯಲ್ಲಿ ಪ್ರಾರಂಭವಾಗಿ 50 ವರ್ಷ (1969) ಸಂದಿವೆ. ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಕಾರ್ಯ ನಿರ್ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.