Advertisement
40 ರನ್ ಹಿನ್ನಡೆಗೆ ಸಿಲುಕಿದ ಉತ್ತರಪ್ರದೇಶ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 204 ರನ್ ಮಾಡಿತ್ತು. ಆರಂಭಕಾರ ಅಲ್ಮಾಸ್ ಶೌಕತ್ ಅವರ ಶತಕ ಪೂರ್ತಿಗೊಂಡೊಡನೆ ಪಂದ್ಯವನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು. ಆಗ ಚಹಾ ವಿರಾಮದ ಸಮಯವಾಗಿತ್ತು. ಪಂದ್ಯ ಮುಂದುವರಿದರೂ ಸ್ಪಷ್ಟ ಫಲಿತಾಂಶ ದೊರಕುವ ಯಾವುದೇ ಸಾಧ್ಯತೆ ಇರದ ಕಾರಣ ಉಭಯ ತಂಡಗಳ ನಾಯಕರು ಪಂದ್ಯವನ್ನು ಇಲ್ಲಿಗೇ ನಿಲ್ಲಿಸುವ ನಿರ್ಧಾರಕ್ಕೆ ಬಂದರು.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಆರಂಭಕಾರ ಆರ್ಯನ್ ಜುಯಾಲ್ ಅವರು° ಸೊನ್ನೆಗೆ ಕಳೆದುಕೊಂಡ ಬಳಿಕ ಮತ್ತೂಬ್ಬ ಓಪನರ್ ಅಲ್ಮಾಸ್ ಶೌಕತ್ ತಂಡದ ನೆರವಿಗೆ ನಿಂತರು. ಕರ್ನಾಟಕದ ಬೌಲಿಂಗ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಅವರು 210 ಎಸೆತಗಳಿಂದ 2ನೇ ಪ್ರಥಮ ದರ್ಜೆ ಶತಕವನ್ನು ಪೂರ್ತಿಗೊಳಿಸಿದರು. ಇದರಲ್ಲಿ 14 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು.
Related Articles
Advertisement
6 ವಿಕೆಟ್ ಜತೆಗೆ ಅಜೇಯ 34 ರನ್ ಬಾರಿಸಿ ಆಲ್‌ರೌಂಡ್ ಪ್ರದರ್ಶನವಿತ್ತ ಅಭಿಮನ್ಯು ಮಿಥುನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಹಿಮಾಚಲಪ್ರದೇಶ ವಿರುದ್ಧ ಮೈಸೂರಿನಲ್ಲಿ ಆಡಲಿದೆ. ಡಿ. 25ರಿಂದ 28ರ ತನಕ ಈ ಪಂದ್ಯ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಉತ್ತರಪ್ರದೇಶ-281 ಮತ್ತು 3 ವಿಕೆಟಿಗೆ 204 (ಶೌಕತ್ 103, ಕೌಶಿಕ್ 45, ಅಕ್ಷದೀಪ್ 38, ಮಥಾಯಿಸ್ 27ಕ್ಕೆ 1, ಮೋರೆ 52ಕ್ಕೆ 1, ಗೋಪಾಲ್ 61ಕ್ಕೆ 1). ಪಂದ್ಯಶ್ರೇಷ್ಠ: ಅಭಿಮನ್ಯು ಮಿಥುನ್.