Advertisement

ಗೋಡೆಗಳಿಗೆ ಕನ್ನಡ ಸಾಹಿತಿಗಳ ಚಿತ್ರ ಬಿಡಿಸಿ

08:55 PM Oct 18, 2019 | Lakshmi GovindaRaju |

ನಂಜನಗೂಡು: ನಗರದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಮನವಿ ಮಾಡಿದರು. ಇಲ್ಲಿನ ಮಿನಿವಿಧಾನ ಸೌಧದದಲ್ಲಿನ ಆವರಣದಲ್ಲಿ ಶುಕ್ರವಾರ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

Advertisement

ಅಂದು ಕನ್ನಡ ಮಾತೆ ಭುವನೇಶ್ವರಿ ಮೆರವಣಿಗೆಯನ್ನು ಜಾನಪದ ಕಲಾ ತಂಡಗಳೊಂದಿಗೆ ವೈಭವಯುತವಾಗಿ ನಡೆಸೋಣ. ಸಂಘ ಸಂಸ್ಥೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು. ಸಲಹೆ, ಸೂಚನೆ ನೀಡಲು ಸಭೆ ಕರೆಯಲಾಗಿದೆ. ತಮ್ಮ ಅಭಿಪ್ರಾಯಗಳನ್ನು ತಾಲೂಕು ಆಡಳಿತಕ್ಕೆ ತಿಳಿಸಿ ಎಂದು ತಿಳಿಸಿದರು.

ಕನ್ನಡ ಚಳವಳಿಗಾರ ಶಿವಶಂಕರ್‌ ಮಾತನಾಡಿ, ನಗರದಲ್ಲಿರುವ ನಾಲ್ಕು ಚಿತ್ರಮಂದಿರದಲ್ಲಿ ನವೆಂಬರ್‌ ತಿಂಗಳಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು. ಮೈಸೂರು ನಗರದಲ್ಲಿನ ಗೋಡೆಗಳ ಮೇಲೆ ಚಿತ್ರ ಬಿಡಿಸಿದಂತೆ ಕವಿಗಳು, ಸಾಹಿತಿಗಳು, ಕನ್ನಡ ಹೋರಾಟಗಾರರು, ಕನ್ನಡಕ್ಕಾಗಿಯೇ ತ್ಯಾಗ ಬಲಿದಾನ ಮಾಡಿದ ಗಣ್ಯರು ಹಾಗೂ ಜಾnನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಬಿಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ನಗರ್ಲೆ ವಿಜಯ್‌ಕುಮಾರ ಮಾತನಾಡಿ, ನಮ್ಮ ತಾಲೂಕಿನವರಾದ ಖ್ಯಾತ ಸಾಹಿತಿ ದೇವನೂರು ಮಹದೇವ ಅವರನ್ನು ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸೋಣ ಎಂದು ಸಲಹೆ ನೀಡಿದರು.

ಎಲ್ಲರ ಸಲಹೆಗಳನ್ನು ಆಲಿಸಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧಕ್ಷರೂ ಆದ ಮಹೇಶ್‌ಕುಮಾರ್‌, ಈ ಸಭೆಯಲ್ಲಿನ ಸಲಹೆ ಸೂಚನೆಗಳನ್ನು ಮನದಲ್ಲಿಟ್ಟುಕೊಂಡು ಸಂಭ್ರಮದ ರಾಜ್ಯೋತ್ಸವ ಆಚರಣೆ ಸಿದ್ಧತೆ ನಡೆಸಲಾಗುವುದು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದರು.

Advertisement

ಸ‌ಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ನಗರಸಭೆ ಅಯುಕ್ತ‌ ಕರಿಬಸವಯ್ಯ, ಪಶುವೈದ್ಯ ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆಯ ಜನಾರ್ದನ್‌, ಸಂಚಾರ ಠಾಣಾಧಿಕಾರಿ ಶಿವಮ್ಮ, ಸಿಡಿಪಿಒ ಗೀತಾಲಕ್ಷ್ಮೀ, ಜ್ಯೋತಿ, ಅಗ್ನಿಶಾಮಕ ಬಾಬು, ಶಿವಶಂಕರ್‌, ನಗರ್ಲೆ ವಿಜಯಕುಮಾರ್‌, ಜಗದೀಶ್‌, ನಾಗರಾಜು, ಮಹದೇವಪ್ಪ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next