Advertisement

ಮತ್ತೆ ದ್ವಿಶತಕ ಬಾರಿಸಿದ ದ್ರಾವಿಡ್‌ ಪುತ್ರ ಸಮಿತ್‌

11:41 PM Feb 18, 2020 | Team Udayavani |

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರ ಮಗ ತಂದೆಯಂತೆ ಮಿಂಚುತ್ತಿದ್ದು ಕೇವಲ ಎರಡು ತಿಂಗಳ ಅಂತರದಲ್ಲಿ ಎರಡನೇ ದ್ವಿಶತಕ ಬಾರಿಸಿದ್ದಾರೆ.

Advertisement

14 ವರ್ಷದೊಳಗಿನವರ ಬಿಟಿರ್‌ ಶೀಲ್ಡ್‌ ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್‌ನ್ಯಾಶನಲ್‌ ಸ್ಕೂಲ್‌ ಮತ್ತು ಶ್ರೀ ಕುಮಾರನ್‌ ಶಾಲಾ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯದಲ್ಲಿ ಸಮಿತ್‌ ದ್ರಾವಿಡ್‌ ಅಮೋಘ ದ್ವಿಶತಕ ದಾಖಲಿಸಿದ್ದಾರೆ. ಒಟ್ಟು 33 ಬೌಂಡರಿಗಳ ನೆರವಿನಿಂದ ಸಮಿತ್‌ ಮನಮೋಹಕ 204 ರನ್‌ ಗಳಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ ತಂಡ ಮೂರು ವಿಕೆಟ್‌ ನಷ್ಟಕ್ಕೆ 377 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಗುರಿ ಬೆನ್ನತ್ತಿದ ಶ್ರೀ ಕುಮಾರನ್‌ ಶಾಲಾ ತಂಡ 110 ರನ್‌ಗಳಿಗೆ ಆಲೌಟಾಯಿತು. ಬೌಲಿಂಗ್‌ನಲ್ಲಿಯೂ ಮಿಂಚಿದ ಸುಮಿತ್‌ ಎರಡು ವಿಕೆಟ್‌ ಉರುಳಿಸಿದರು. ಇದರಿಂದಾಗಿ ಮಲ್ಯ ಅದಿತಿ ಶಾಲೆ 267 ರನ್ನುಗಳಿಂದ ಜಯಭೇರಿ ಬಾರಿಸಿತು.

ಕಳೆದ ಡಿಸೆಂಬರ್‌ನಲ್ಲಿ ಕೋಲ್ಕತಾ ದಲ್ಲಿ ನಡೆದ 14 ವರ್ಷದೊಳಗಿನವರ ರಾಜ್ಯ ಮಟ್ಟದ ಅಂತರ್‌ ವಲಯ ಟೂರ್ನಿಯ ಪಂದ್ಯವೊಂದರಲ್ಲಿ ಸಮಿತ್‌ (201) ದ್ವಿಶತಕ ಮತ್ತು 3 ವಿಕೆಟ್‌ ಪಡೆದಿದ್ದರು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಸಮಿತ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 94 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next