ರಬಕವಿ-ಬನಹಟ್ಟಿ: ನಾಟಕ ಕಲೆ ಶ್ರೇಷ್ಠವಾದುದು. ನಾಟಕದ ಮೂಲಕ ಜನಜಾಗೃತಿ ಉಂಟು ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿಯೂ ನಾಟಕ ಕಲೆ ಉಳಿಯಬೇಕಾದರೆ ಪ್ರತಿಯೊಬ್ಬರು ನಾಟಕ ನೋಡುವುದರ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಬನಹಟ್ಟಿಯ ಭದ್ರನವರ ಕಲ್ಯಾಣ ಮಂಟಪದಲ್ಲಿ ರಬಕವಿ-ಬನಹಟ್ಟಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯತ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಾಣೇಹಳ್ಳಿ ಶಿವ ಸಂಚಾರ ಕಲಾ ತಂಡದವರು ಪ್ರದರ್ಶನ ಮಾಡಿದ ಗಡಿಯಂಕ ಕುಡಿಮುದ್ದ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ನಾಟಕಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಸಾಣೇಹಳ್ಳಿ ಸ್ವಾಮೀಜಿಯವರು ನಾಟಕ ಕಲೆಯನ್ನು ಪ್ರೋತ್ಸಾಹಿಸುವುದರ ಮೂಲಕ ಶ್ರೇಷ್ಠ ಕಾರ್ಯವನ್ನು ಮಾಡುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕವಾಗಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಂಥ ನಾಟಕಗಳು ಜನರಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಕನ್ನಡ ನಾಡಿನ ಸಂಸ್ಕೃತಿ ಶ್ರೇಷ್ಠವಾದುದು ನಮ್ಮ ಸಂಸ್ಕೃತಿಯನ್ನು ನಾಟಕಗಳಿಂದ ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಎಂದರು.
ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ, ಮೂರು ದಿನಗಳ ಕಾಲ ನಾಟಕವನ್ನು ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಸಂಜೆ 6.30ಕ್ಕೆ ಒಕ್ಕಲಿಗ ಮುದ್ದಣ್ಣ, ಮಂಗಳವಾರ ಸತ್ಯಹರಿಶ್ಚಂದ್ರ ನಾಟಕವನ್ನು ಹಮ್ಮಿಕೊಳ್ಳಲಾಗಿದ್ದು, ಕಲಾವಿದರನ್ನು ಪ್ರೋತ್ಸಾಹಿಸಿ, ಕಲೆಯನ್ನು ಉಳಿಸಿ ಬೆಳೆಸಿ. ಈ ನಾಡಿನ ಸಂಸ್ಕೃತಿ, ಅಭಿರುಚಿಗಳು ನಾಟಕ ಕಲೆಯ ಮೂಲಕ ಕಂಡು ಬರುತ್ತವೆ ಎಂದರು.
ವೇದಿಕೆಯ ಮೇಲೆ ರಬಕವಿ-ಬನಹಟ್ಟಿ ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ಗ್ರೇಡ್-2 ತಹಶೀಲ್ದಾರ ಎಸ್.ಬಿ.ಕಾಂಬಳೆ, ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸಿಪಿಐ ಜೆ. ಕರುಣೇಶಗೌಡ, ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪುರಸಭೆ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ ಇದ್ದರು.
ಸಮಾರಂಭದಲ್ಲಿ ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ, ಶಂಕರ ಜಾಲಿಗಿಡದ, ದುಂಡಪ್ಪ ಮಾಚಕನೂರ, ವೆಂಕಟೇಶ ನಿಂಗಸಾನಿ, ಬಿ. ಡಿ. ಭದ್ರನ್ನವರ, ಎಂ. ಬಿ. ನಾಶಿ, ಚಿದಾನಂದ ಸೊಲ್ಲಾಪುರ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಅನುರಾಧಾ ಹೊರಟ್ಟಿ, ಪ್ರಭು ಪೂಜಾರಿ, ಮಾಲಾ ಬಾವಲತ್ತಿ, ಪವಿತ್ರಾ ತುಕ್ಕನ್ನವರ ಸವಿತಾ ಹೊಸೂರ, ಈಶ್ವರ ಬಿರಾದಾರ ಪಾಟೀಲ, ಎಂ. ಆರ್. ಕವಟಕೋಪ, ಪಿ. ಆರ್. ಮಠಪತಿ, ರಾಚಯ್ಯ ಮಠಪತಿ, ಎಂ. ಎಸ್. ನೀಲನವರ, ವಿ. ಪಿ. ಕುಗಟಿ, ಸದಾಶಿವ ಕುಂಬಾರ, ಅಮಸಿದ್ದ ಬಿರಾದಾರ, ಮಂಜುನಾಥ ಸಿದ್ದನ್ನವರ, ಎಸ್. ಎಸ್. ಸಜ್ಜನ, ರವಿ ಈಟಿ, ವಿಜಯಕುಮಾರ ನಿಡಗುಂದಿ ಸೇರಿದಂತೆ ಅನೇಕರು ಇದ್ದರು.