Advertisement

ಕೊಟ್ಟಾರಚೌಕಿ: ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

02:40 AM Jun 09, 2018 | Karthik A |

ಮಹಾನಗರ: ನಗರದ ಕೊಟ್ಟಾರ ಚೌಕಿ ಹಾಗೂ ಕೋಡಿಕಲ್‌ ನಿಂದ ರಾಷ್ಟ್ರಿಯ ಹೆದ್ದಾರಿಯನ್ನು ಸಂಪರ್ಕಿಸುವ ಬೃಹತ್‌ ಚರಂಡಿಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ತಿಗೊಳಿಸುವಂತೆ ಸ್ಥಳೀಯ ಸುಬ್ರಹ್ಮಣ್ಯಪುರ ರೆಸಿಡೆಂಟ್ಸ್‌ ಸಮಿತಿಯು ಕಳೆದೊಂದು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಪ್ರವಾಹದ ಸ್ಥಿತಿ ಇರುವುದು ಕೂಡ ಇದಕ್ಕೆ ಕಾರಣ.! ಪಾಲಿಕೆಯು 2012ರಲ್ಲಿ ಈ ಎರಡು ಬೃಹತ್‌ ಚರಂಡಿ ನಿರ್ಮಾಣಕ್ಕೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಿತ್ತು. ವಿಶೇಷವೆಂದರೆ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ತೋಡು ಕಿರಿದಾಗುತ್ತಿದ್ದು, ಮಳೆ ನೀರು ರಸ್ತೆಗೆ ಹರಿಯುತ್ತಿದೆ.

Advertisement

ಕೃತಕ ನೆರೆಗೆ ಇದೂ ಕಾರಣ
ಚರಂಡಿಯಲ್ಲಿ ಬೆಳೆದಿರುವ ಪೊದೆಗಳನ್ನು ತೆಗೆಯಲಾಗಿದ್ದು,  ಹೂಳು ತೆಗೆದಿಲ್ಲ. ಹೀಗಾಗಿ ಮಣ್ಣು ತುಂಬಿ ಚರಂಡಿ ಮುಚ್ಚುವ ಅಪಾಯವಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ನಾವು ಆಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಸಮಿತಿ ಸದಸ್ಯ ಎಚ್‌.ವಿ. ಶೆಣೈ.

ಪಾಲಿಕೆ ಆಯುಕ್ತರಿಗೆ ಪತ್ರ
ಸಮಿತಿಯವರು ಜನಹಿತ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ ಪರಿಣಾಮ 2016ರ ಜನವರಿಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕರು ಸಮಸ್ಯೆ ಬಗೆಹರಿಸುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶ ಪತ್ರವೊಂದನ್ನು ನೀಡಿದ್ದರು.

2012ರ ಕಾಮಗಾರಿ!
ಪಾಲಿಕೆಯು 2012ರಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಮೊದಲನೇ ಹಂತದಲ್ಲಿ ಉಳಿಕೆಯಾಗಿರುವ ಮೊತ್ತದಲ್ಲಿ ಪರಿಷ್ಕೃತ ಕ್ರಿಯಾಯೋಜನೆಯನ್ವಯ ಕಾಮಗಾರಿ ಕೈಗೊಂಡಿತ್ತು. ಕೊಟ್ಟಾರ ಚೌಕಿಯಿಂದ 4ನೇ ಮೈಲ್‌ ತನಕ ಮಳೆನೀರು ಬೃಹತ್‌ ಚರಂಡಿ ನಿರ್ಮಾಣಕ್ಕೆ 49.97 ಲಕ್ಷ ರೂ. ಹಾಗೂ ರಾ.ಹೆ.ಯಲ್ಲಿ ಕೋಡಿಕಲ್‌ ನಿಂದ ಬಂದು ಸೇರುವ ಕೂಡುರಸ್ತೆಯಲ್ಲಿ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿ 19.97 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಆದರೆ ಕೊಟ್ಟಾರ ಚೌಕಿಯಿಂದ ಕೋಡಿಕಲ್‌ ಸೇತುವೆವರೆಗಿನ ಕಾಮಗಾರಿ ಮಾತ್ರ ನಡೆಸಲಾಗಿದೆ.

ಈ ಕುರಿತು ದೂರು ಬಂದಿದೆ
ಕೊಟ್ಟಾರ ಚೌಕಿಯಲ್ಲಿ ತೋಡಿನ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಸುಬ್ರಹ್ಮಣ್ಯಪುರ ರೆಸಿಡೆಂಟ್ಸ್‌ ಸಮಿತಿಯವರಿಂದ ದೂರು ಬಂದಿದೆ. ದೂರನ್ನು ಪರಿಶೀಲನೆ ನಡೆಸಿದ್ದು, ಆದರೆ ಈಗ ತಾನು ವರ್ಗಾವಣೆಗೊಳ್ಳುತ್ತಿದ್ದೇವೆ. ನನ್ನ ಜಾಗಕ್ಕೆ ಬೇರೆ ಆಯುಕ್ತರು ಬರುತ್ತಿದ್ದು, ಅವರು ಗಮನಹರಿಸಬಹುದು.
– ಡಾ| ಭಾಸ್ಕರ್‌, ಆಯುಕ್ತರು, ಮುಡಾ

Advertisement

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next