Advertisement
ಬಲ್ಲಾಳ್‌ಬಾಗ್ ಮೂಲಕ ಕೊಡಿಯಾಲಬೈಲ್, ಅಳಕೆ- ಕುದ್ರೋಳಿ ಪ್ರದೇಶದಲ್ಲಿ ಸಾಗುವ ರಾಜಕಾಲುವೆಯಲ್ಲಿ ಮುಖ್ಯವಾಗಿ ಒತ್ತುವರಿಗಿಂತಲೂ ಹೂಳು ತುಂಬಿರುವುದೇ ಪ್ರಮುಖ ಕಾರಣ. ಪಾಲಿಕೆಯು ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇರುವುದರಿಂದ ಮಳೆ ನೀರು ಕಾಲುವೆಯ ಮೇಲ್ಮುಖವಾಗಿ ಸಾಗುತ್ತದೆ.
ಸಾರ್ವಜನಿಕರು ತಮ್ಮ ಖಾಸಗಿ ಜಾಗದಲ್ಲಿ ತೆಗೆದ ಮಣ್ಣು, ಕಟ್ಟಡದ ಅವಶೇಷಗಳನ್ನು ತೋಡಿನ ಬದಿ ತಂದು ರಾಶಿ ಹಾಕುತ್ತಾರೆ. ಮಳೆ ಬೀಳುವ ಸಂದರ್ಭ ಇದು ತೋಡು ಸೇರುವುದರಿಂದ ನೀರಿನ ಹರಿವಿಗೆ ತೊಂದರೆಯಾಗುತ್ತಿದೆ. ಮುಖ್ಯವಾಗಿ ಕುದ್ರೋಳಿ ಸಮೀಪದ ಮಂಡಿ ಭಾಗದಲ್ಲಿ ಇದೇ ರೀತಿ ಮಣ್ಣಿನ ರಾಶಿ ತೋಡು ಸೇರಿರುವ ಘಟನೆ ನಡೆದಿತ್ತು.
Related Articles
Advertisement
ಡ್ರೆಜ್ಜಿಂಗ್ ಕಾರ್ಯವಿಲ್ಲಅಳಕೆಯಲ್ಲಿ ಸಾಗುವ ರಾಜ ಕಾಲುವೆಯು ಅಳಿವೆಬಾಗಿಲಿನಲ್ಲಿ ಪಲ್ಗುಣಿ ತೋಡನ್ನು ಸೇರುತ್ತದೆ. ಹೀಗಾಗಿ ತೋಡಿನಲ್ಲಿ ಹರಿದು ಬಂದ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಅಳವೆಬಾಗಿಲಿನಲ್ಲಿ ಸಂಗ್ರಹವಾಗುತ್ತದೆ. ಸೇತುವೆಯಲ್ಲಿ ಹೂಳು
ತೋಡಿಗೆ ಅಲ್ಲಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮಳೆ ನೀರಿನೊಂದಿಗೆ ಹರಿದು ಬರುವ ಕಸಕಡ್ಡಿಗಳು ಇದ ರ ಲ್ಲಿ ನಿಲ್ಲುವುದರಿಂದ ನೀರು ಹರಿಯಲು ತಡೆಯುಂಟಾಗುತ್ತಿ ದೆ. ಬಲ್ಲಾಳ್‌ಬಾಗ್ ಪ್ರದೇಶದಲ್ಲಿ ಮುಖ್ಯರಸ್ತೆಗೆ ಮೋರಿ ಹಾಕಿದ್ದು, ಅದರ ಮೇಲೆ ಕಸಕಡ್ಡಿಗಳು ತುಂಬಿಕೊಂಡಿದೆ. ಅಳಕೆಯಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗಿದ್ದು, ಅದರ ಬದಿಯಲ್ಲಿ ಅನೇಕ ಪೈಪ್‌ಗ್ಳು ಹಾದು ಹೋಗಿರುವುದರಿಂದ ಅಲ್ಲೂ ಕಸಕಡ್ಡಿ ನಿಲ್ಲುವ ಸಾಧ್ಯತೆ ಇದೆ. ಪ್ರಸ್ತುತ ಅದನ್ನು ತೆರವು ಗೊಳಿಸಲಾಗಿದ್ದರೂ ಮುಂದಿನ ದಿನಗಳಲ್ಲಿ ಮತ್ತೆ ಅದೇ ರೀತಿ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ತಡೆಗೋಡೆಗಳ ಕುಸಿತ
ತೋಡಿನ ಬದಿಯಲ್ಲಿ ಮಣ್ಣಿನ ಸವೆತ ಉಂಟಾಗಬಾರದು ಎಂಬ ಕಾರಣಕ್ಕೆ ಎರಡೂ ಬದಿಗಳಲ್ಲಿ ಕಲ್ಲಿನ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅಳಕೆ, ಕುದ್ರೋಳಿ ಪ್ರದೇಶದಲ್ಲಿ ಅದು ಕುಸಿದು ತೋಡನ್ನು ಸೇರುತ್ತಿದೆ. ಇದು ಕೂಡ ನೀರು ಹರಿವಿಗೆ ತೊಂದರೆಯಾಗುತ್ತಿದೆ. ಈಗ ತೋಡಿನಲ್ಲಿರುವ ಮಣ್ಣನ್ನು ತೆಗೆಯದೇ ಇರುವುದರಿಂದ ನೀರು ಸಾಗಲು ಕಷ್ಟವಾಗುತ್ತದೆ. ಈ ರೀತಿ ವರ್ಷದಿಂದ ವರ್ಷಕ್ಕೆ ಮಣ್ಣಿನ ಪ್ರಮಾಣ ಹೆಚ್ಚಾಗಿ, ತೋಡಿನ ಆಳ ಕಿರಿದಾಗುತ್ತಿದೆ. ಬಲ್ಲಾಳ್‌ಬಾಗ್, ಕುದ್ರೋಳಿ, ಅಳಕೆ ಪ್ರದೇಶದಲ್ಲಿ ಅಲ್ಲಲ್ಲಿ ಮಣ್ಣು ತುಂಬಿರುವುದರಿಂದ ಹೆಚ್ಚಿನ ನೀರು ಬಂದಾಗ ತೋಡಿನಿಂದ ಹೊರಕ್ಕೆ ಹರಿಯುವ ಸಾಧ್ಯತೆ ಇದೆ.