Advertisement
ಉಪ್ಪಿನಂಗಡಿ ಪೇಟೆಯ ಬ್ಯಾಂಕ್ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಹಲವೆಡೆ ಚರಂಡಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣ ಎನ್ನವಾಗಿದೆ. ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ವಾರ್ಡ್ ಸದಸ್ಯರಲ್ಲಿ ಪ್ರಶ್ನಿಸಿದಾಗ, ಸಮಸ್ಯೆಯನ್ನು ಸರಿಪಡಿಸಲು ಪಿಡಿಒಗೆ ಸತತವಾಗಿ ಮನವಿ ಮಾಡಲಾಗಿದೆ. ಅವರು ಸ್ಪಂದಿ ಸುತ್ತಿಲ್ಲ. ಪಂ. ಆಡಳಿತಕ್ಕೆ ಶೇ. 95ರಷ್ಟು ಆದಾಯ ತಂದುಕೊಡುವ ವಾರ್ಡ್‌ಗೆ ಮೂಲಸೌಕರ್ಯ ಒದಗಿಸಲು ಕಾನೂನು ತೊಡಕು ಕಾಡುತ್ತಿದೆಯೇ? ಅಥವಾ ಕಾನೂನು ಇರುವುದೇ ಸಮಸ್ಯೆ ಸೃಷ್ಟಿಸಲೇ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಚರಂಡಿ ನೀರು ಹರಿಯುತ್ತಿರುವ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡ ಬೇಕಾದ ಸ್ಥಿತಿ ಇದೆ. ಪುಟ್ಟ ಮಕ್ಕಳು ಕೊಳಚೆ ನೀರಿನಲ್ಲಿ ನಡೆಯುವುದನ್ನು ಕಂಡಾಗ ಬೇಸರವಾಗುತ್ತದೆ. ಪಂಚಾಯತ್ ಆಡಳಿತ ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಮುಖಂಡರಾದ ಡಾ| ಕೈಲಾರ್ ರಾಜಗೋಪಾಲ ಭಟ್ ಆಗ್ರಹಿಸಿದ್ದಾರೆ. ಉಪ್ಪಿನಂಗಡಿ ಪೇಟೆಯ ಸಮಸ್ಯೆ ಗಮನಕ್ಕೆ ಬಂದಿದೆ. ಕಾರಣಾಂತರಗಳಿಂದ ಬಗೆಹರಿಸಲು ಅಸಾಧ್ಯವಾಗಿತ್ತು. ಮಳೆಯ ಪ್ರಮಾಣವೂ ಅಧಿಕವಾಗಿದೆ. ಕಳೆದ ಸಾಮಾನ್ಯ ಸಭೆಯಲ್ಲಿ ಚರಂಡಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ. ಶೀಘ್ರದಲ್ಲಿ ಸಮಸ್ಯೆ ನಿವಾರಣೆ ಆಗಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ. ಪ್ರತಿಕ್ರಿಯಿಸಿದ್ದಾರೆ. ಸಮಾನವಾಗಿ ಹಂಚಿದ್ದೇವೆ
ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಕಾರಣದಿಂದಾಗಿ ಪಂಚಾಯತ್ ಸಭೆ ಸಕಾಲದಲ್ಲಿ ನಡೆಯದ ಕಾರಣ ಕ್ರಿಯಾ ಯೋಜನೆ ಮಾಡಲು ಆಗಿಲ್ಲ. ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮ ಜರುಗಿಸಲಾಗಿದ್ದು, ಪ್ರತಿ ವಾರ್ಡ್‌ಗೆ ಚರಂಡಿ ದುರಸ್ತಿಗಾಗಿ ತಲಾ 50 ಸಾವಿರ ರೂ.ಗಳನ್ನು ನೀಡಲಾಗುವುದು. ಹೆಚ್ಚು ಆದಾಯ ತರುವ ಮೊದಲ ವಾರ್ಡ್‌ಗೆ ಹೆಚ್ಚು ಹಣ ಮೀಸಲಿರಿಸಲು ಉಳಿದ ಸದಸ್ಯರು ಒಪ್ಪದ ಕಾರಣ ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಣ ಹಂಚಲಾಗಿದೆ ಎಂದು ಪಿಡಿಒ ಅಬ್ದುಲ್ಲಾ ಅಸಫ್ ತಿಳಿಸಿದ್ದಾರೆ.