Advertisement

ಬಂಡೀಮಠ: ರಸ್ತೆಯಲ್ಲೇ ಹರಿಯುತ್ತಿದೆ ಡ್ರೈನೇಜ್‌ ನೀರು

10:43 PM Jul 24, 2019 | Sriram |

ಕಾರ್ಕಳ: ಇಲ್ಲಿನ ನೂತನ ಬಸ್‌ಸ್ಟಾಂಡ್‌ನ‌ ಬಳಿ ಡ್ರೈನೇಜ್‌ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೂ ಪುರಸಭೆ ಮೌನವಾಗಿದೆ. ಬಂಡೀಮಠದ ಇಂದಿರಾ ಕ್ಯಾಂಟೀನ್‌ ಎದುರುಗಡೆಯಿರುವ ಡ್ರೈನೇಜ್‌ ಹೊಂಡದಿಂದ ತ್ಯಾಜ್ಯ ನೀರು ತುಂಬಿ ಹರಿಯುತ್ತಿದ್ದು ಸ್ಥಳೀಯ ಮನೆಯವರಿಗೆ ತೊಂದರೆಯುಂಟಾಗಿದೆ. ಮನೆ ಪಕ್ಕ ಬಾವಿಯಿದ್ದು ಅದರ ನೀರು ಕೂಡ ಕಲುಷಿತಗೊಳ್ಳುತ್ತಿದೆ.

Advertisement

ಸಮಸ್ಯೆ ಕುರಿತು ಬೇಸಗೆಯಲ್ಲೇ ಪುರಸಭೆಯ ಗಮನಕ್ಕೆ ತರಲಾಗಿತ್ತು. ಆದರೂ ಯಾವೊಂದು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಇದೀಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಎಸಿಗೆ ದೂರು
ಸಮಸ್ಯೆ ಕುರಿತು ಸಹಾಯಕ ಆಯುಕ್ತ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಅವರ ಗಮನಕ್ಕೂ ತರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್‌ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಶೌಚಾಲಯ ಸ್ವತ್ಛವಾಗಿಲ್ಲ
ಬಂಡೀಮಠದ ಶೌಚಾಲಯವೂ ಸ್ವತ್ಛತೆಯಿಲ್ಲದೇ ದುರ್ವಾಸನೆ ಬೀರುತ್ತಿದೆ. ಶೌಚಾಲಯವಿದ್ದರೂ ಸಾರ್ವಜನಿಕರು ಬಳಸುವಂತಿಲ್ಲ. ಬಂಡಿಮಠದಲ್ಲಿ ಅದೊಂದೇ ಸಾರ್ವಜನಿಕ ಶೌಚಾಲಯವಿರುವುದು. ನಿರ್ವಹಣೆಯಿಲ್ಲದೇ ಅದರತ್ತ ಹೋಗುವ ಹಾಗಿಲ್ಲ ಎನ್ನುತ್ತಾರೆ ಸ್ಥಳೀಯ ಅಂಗಡಿ ಮಾಲಕರು.

Advertisement

Udayavani is now on Telegram. Click here to join our channel and stay updated with the latest news.

Next