Advertisement

ಚರಂಡಿಗಳಿಗೆ ಬೇಕಿದೆ ಕಾಯಕಲ್ಪ

09:36 AM Apr 15, 2022 | Team Udayavani |

ವೇಣೂರು: ವೇಣೂರು-ನಾರಾವಿ ಸಂಪರ್ಕ ರಸ್ತೆಯ ಮಧ್ಯೆ ಸಿಗುವ ಅಂಡಿಂಜೆ ಗ್ರಾಮದ ಪ್ರಮುಖ ರಸ್ತೆಗಳ ಚರಂಡಿಗಳು ನಿರ್ವಹಣೆಯಿಲ್ಲದೆ ಸೊರಗಿವೆ. ಇಲ್ಲಿ ಅಗತ್ಯವಿರುವೆಡೆ ಚರಂಡಿಗಳೇ ಇಲ್ಲ. ಹಲವೆಡೆ ಇದ್ದ ಚರಂಡಿಗಳೂ ನಿರ್ವಹಣೆ ಇಲ್ಲದಾಗಿದೆ. ಇಲ್ಲಿ ಮಳೆ ನೀರು ತೋಡಿನಂತೆ ರಸ್ತೆಯಲ್ಲೇ ಹರಿಯುತ್ತಿದ್ದು, ಇದರಿಂದ ಡಾಮಾರು ರಸ್ತೆ ಹಾಳಾಗಲು ಪ್ರಮುಖ ಕಾರಣವಾಗುತ್ತಿವೆ.

Advertisement

ಅಡ್ಡ ರಸ್ತೆಗಳಿಗೆ ಮೋರಿ ರಚನೆಗೆ ಆಗ್ರಹ

ಅಂಡಿಂಜೆಯ ಪ್ರಮುಖ ರಸ್ತೆ ಸಂಪರ್ಕಿಸುವ ಹಲವು ಅಡ್ಡ ರಸ್ತೆಗಳಿದ್ದು, ಹೆಚ್ಚಿನ ರಸ್ತೆಗಳಿಗೂ ಮೋರಿ ಅಳವಡಿಕೆಯಾಗಿಲ್ಲ. ಇಲ್ಲಿ ಮಳೆ ಹಾಗೂ ಚರಂಡಿಯ ನೀರು ರಸ್ತೆಯಲ್ಲೇ ಹರಿಯುವಂತಾಗಿದ್ದು, ಮಣ್ಣು ತುಂಬಿಸಿ ಮುಚ್ಚಲಾಗಿರುವ ಚರಂಡಿಗಳನ್ನು ತೆರೆಯಲೇಬೇಕಿದೆ. ಪ್ರತೀ ವರ್ಷ ಪಂಚಾಯತ್‌ ವ್ಯಾಪ್ತಿಯಲ್ಲಿ ರಸ್ತೆಗೆ ಆವರಿಸಿರುವ ಪೊದೆಗಳನ್ನು ತೆಗೆದು, ಚರಂಡಿಯ ಹೂಳೆತ್ತುವ ವಾಡಿಕೆ ಇತ್ತು. ಆದರೆ ಈಗ ಇಲ್ಲ.

ರಸ್ತೆ, ಸೇತುವೆಗೆ ಆವರಿಸಿದೆ ಪೊದೆ

Advertisement

ಅಂಡಿಂಜೆ ಗ್ರಾಮದ ಕಿಲಾರದಲ್ಲಿರುವ ಕಿರುಸೇತುವೆಗೆ ಪೊದೆಗಳು ಆವರಿಸಿ ಸಂಚಾರಕ್ಕೂ ಅಪಾಯವನ್ನು ತಂದೊಡ್ಡಿದೆ. ಇಲ್ಲಿರುವ ರಬ್ಬರ್‌ ತೋಟದ ಬಳ್ಳಿಗಳು ಚರಂಡಿಯನ್ನು ದಾಟಿ ರಸ್ತೆಗೆ ಆವರಿಸಿದೆ. ಇಲ್ಲಿನ ಚರಂಡಿ ದುರಸ್ತಿಗೊಳಿಸಿ ರಸ್ತೆಯಲ್ಲಿ ಹರಿಯುವ ನೀರನ್ನು ಚರಂಡಿ ಮೂಲಕ ನದಿಗೆ ಬಿಡುವ ಕಾರ್ಯ ಮಾಡಬೇಕಿದೆ.

ತೊಂದರೆ ಕಟ್ಟಿಟ್ಟ ಬುತ್ತಿ

ಅಡಿಂಜೆ ಗ್ರಾಮ ಪಂಚಾಯತ್‌ ಕಟ್ಟಡದ ಸಮೀಪದ ಒಳರಸ್ತೆಯ ಜನವಸತಿ ಪ್ರದೇಶದ ರಸ್ತೆಯ ಮೋರಿ ಗಳಲ್ಲಿ ಸಿಲುಕಿರುವ ಕಸ, ಕಡ್ಡಿಗಳನ್ನು ತೆರೆವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಪಂಚಾಯತ್‌ ಆಡಳಿತ ಗ್ರಾಮದ ಚರಂಡಿ ಸಮಸ್ಯೆಗಳ ಬಗ್ಗೆ ಕಣ್ತೆರೆದು ಮಳೆಗಾಲದ ಮುನ್ನ ಕಾಯಕಲ್ಪ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next